್ಡ ಅನಿಲ್ ಎಚ್.ಟಿ.

ನವೆಂಬರ್ ೯, ೨೦೧೯ ರಂದು ಈ ದೇಶದ ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆಯಲ್ಲಿಯೇ ಶ್ರೀರಾಮಮಂದಿರ ನಿರ್ಮಾಣ ಮಾಡಬಹುದು ಎಂಬ ಐತಿಹಾಸಿದ ತೀರ್ಪು ನೀಡಿತ್ತು. ಆ ತೀರ್ಪಿನಿಂದಾಗಿಯೇ ಇದೀಗ ಶ್ರೀರಾಮಜನ್ಮಭೂಮಿಯಾದ ಅಯೋಧ್ಯೆಯಲ್ಲಿ ವೈಭವದ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದೆ. ಇಂಥ ಮಹತ್ವದ ತೀರ್ಪು ಬರೆದ ನ್ಯಾಯಾಧೀಶ ಯಾರೆಂದು ಗೊತ್ತೇ...?

ಸರ್ವೋಚ್ಚ ನ್ಯಾಯಾಲಯದ ಸಂವಿಧಾನಿಕ ಪೀಠ ಅಥವಾ ಐವರು ನ್ಯಾಯಾಧೀಶರು ಇದ್ದ ಪೀಠ ಏಕಮತದ ತೀರ್ಪು ನೀಡಿದ್ದರು.

ಆದರೆ ಈ ತೀರ್ಪನ್ನು ಐವರ ಪೈಕಿ ಒಬ್ಬರು ಬರೆದಿದ್ದಾರಲ್ಲ.. ಅವರು ಯಾರೆಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಐವರು ನ್ಯಾಯಾಧೀಶರ ಪೈಕಿ ಮಹತ್ವದ ತೀರ್ಪು ಬರೆದವರು ಯಾರೆಂಬುದನ್ನು ಬಹಿರಂಗಪಡಿಸದೇ ಇರಲು ತೀರ್ಪಿಗೆ ಮುನ್ನ ನಾವು ಐವರೂ ನಿರ್ಧರಿಸಿದ್ದೆವು ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಧನಂಜಯ ಯಶವಂತ್ ಚಂದ್ರಚೂಡ್ ಇದೀಗ ಬಹಿರಂಗಪಡಿಸಿದ್ದಾರೆ.

ಕೋರ್ಟ್ ಪರಿಭಾಷೆಯಲ್ಲಿ ಹೇಳುವುದಾದರೇ ಆಥರ್ ಶಿಪ್ ಅಂದರೆ ತೀರ್ಪು ಬರೆಯುವಿಕೆ ಪ್ರತೀ ತೀರ್ಪಿನಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ನಾನು.... ಈ ನ್ಯಾಯಾಧೀಶ ಎಂಬ ಉಲ್ಲೇಖ ನ್ಯಾಯಾಲಯದ ತೀರ್ಪಿನಲ್ಲಿ ಮುಖ್ಯವಾಗಿಯೇ ಅಡಕವಾಗಿರುತ್ತದೆ. ಆದರೆ ಅಯೋಧ್ಯೆ ವಿವಾದದ ತೀರ್ಪು ಬರೆದದ್ದು ಯಾರು ಎಂಬುದನ್ನು ಇಂದಿಗೂ ರಹಸ್ಯವಾಗಿಯೇ ಉಳಿಸಿಕೊಳ್ಳಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ಅಂದಿನ ಮುಖ್ಯ ನ್ಯಾಯಾಧೀಶ ರಂಜನ್ ಗೋಗೋಯ್ ನೇತೃತ್ವದಲ್ಲಿ ತೀರ್ಪು ನೀಡಿದ್ದ ಐವರು ನ್ಯಾಯಾಧೀಶರು, ಶ್ರೀರಾಮಮಂದಿರವನ್ನು ಅಯೋಧ್ಯೆಯಲ್ಲಿಯೇ ನಿರ್ಮಿಸಬೇಕು, ಅಂತೆಯೇ ಅಯೋಧ್ಯೆ ಬಳಿಯೇ ಮಸೀದಿ ನಿರ್ಮಾಣಕ್ಕೆ ೫ ಎಕ್ರೆ ಜಮೀನು ಮಂಜೂರು ಮಾಡಬೇಕೆಂದು ತೀರ್ಪು ನೀಡಿತ್ತು. ತೀರ್ಪಿಗೆ ಮುನ್ನ ನಾವು ಐವರು ನ್ಯಾಯಾಧೀಶರು ಒಟ್ಟಿಗೆ ಕುಳಿತೆವು. ಈ ಸಂದರ್ಭವೇ ತೀರ್ಪಿನ ಆಥರ್ ಶಿಪ್ ಬಗ್ಗೆ ಬಹಿರಂಗಪಡಿಸಬಾರದು ಎಂದು ನಿರ್ಧರಿತವಾಯಿತು. ಇದಕ್ಕೆ ಬದಲಾಗಿ, ಇದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಎಂದು ದಾಖಲಿಸಲು ನಾವು ಒಮ್ಮತದಿಂದ ನಿರ್ಧರಿಸಿದ್ದಾಗಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ. ಹೀಗಾಗಿಯೇ ಈ ಐತಿಹಾಸಿಕ ತೀರ್ಪು ಭವಿಷ್ಯದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಎಂದೇ ಪರಿಗಣಿತವಾಗುತ್ತದೆಯೇ ವಿನಾ ಯಾವುದೇ ಓರ್ವ ನ್ಯಾಯಾಧೀಶನ ತೀರ್ಪಾಗಿ ಪರಿಗಣಿಸಲ್ಪಡುವುದಿಲ್ಲ. ಇದರಿಂದಾಗಿ ಶ್ರೀರಾಮಮಂದಿರದ ವಿಚಾರಣೆ ಕೈಗೊಂಡ ನ್ಯಾಯಾಧೀಶರೆಲ್ಲರೂ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದರು ಎಂಬ ಸಂದೇಶ ಹೋಗುತ್ತದೆ. ಇಲ್ಲದಿದ್ದಲ್ಲಿ ಪಂಚ ನ್ಯಾಯಾಧೀಶರು ಬೇರೆ ಬೇರೆ ಅಭಿಪ್ರಾಯ ಹೊಂದಿದ್ದರು ಎಂಬ ತಪ್ಪು ಭಾವನೆಗೆ ಕಾರಣವಾಗುತ್ತಿತ್ತು ಎಂದು ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.

ತೀರ್ಪಿನ ಪ್ರಮುಖಾಂಶ

ಇಷ್ಟಕ್ಕೂ ಶ್ರೀರಾಮ ಮಂದಿರಕ್ಕೆ ಸಂಬAಧಿಸಿದAತೆ ೨೦೧೯ರ ನ. ೯ ರಂದು ಶನಿವಾರ ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಐತಿಹಾಸಿಕ ತೀರ್ಪಿನ ಪ್ರಮುಖ ಅಂಶಗಳು ಏನಿತ್ತು.?

ಅಯೋಧ್ಯೆಯಲ್ಲಿನ ೨.೭೭ ಎಕ್ರೆಗಳ ಜಮೀನಿಗೆ ಸಂಬAಧಿಸಿದAತೆ ವ್ಯಾಜ್ಯ ಇತ್ತು. ಹಿಂದೂ ಮತ್ತು ಮುಸಲ್ಮಾನ್ ಸಮುದಾಯದವರು ಇದೇ ಜಾಗಕ್ಕಾಗಿ ಹಕ್ಕು ಪ್ರತಿಪಾದಿಸಿದ್ದರು. ಹಿಂದೂಗಳು ಇದೇ ಜಾಗದಲ್ಲಿ ಶ್ರೀರಾಮ ದೇವಾಲಯ ನಿರ್ಮಿಸಬೇಕು ಎಂಬ ಹಕ್ಕು ಪ್ರತಿಪಾದಿಸಿದ್ದರು. ಈ ಸ್ಥಳದಲ್ಲಿ ಶ್ರೀರಾಮನ ದೇವಾಲಯ ಇತ್ತು ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಕೆಲ ಮುಸಲ್ಮಾನ್ ಸಂಘಟನೆಗಳು ವಾದಿಸಿದ್ದವು. ೧೯೮೦ ರಿಂದ ರಾಜಕೀಯ ತಿರುವುಗಳನ್ನೂ ಅಯೋಧ್ಯೆಯ ಶ್ರೀರಾಮಂದಿರ ನಿರ್ಮಾಣ ಪ್ರಕರಣ ಪಡೆದಿತ್ತು. ರಾಮ ಜನಿಸಿದ್ದ ಸ್ಥಳದಲ್ಲಿ ಬಾಬರ್‌ನ ಗೋರಿ ಕಟ್ಟಿ ಮಸೀದಿ ನಿರ್ಮಿಸಿದ್ದರಿಂದ ವಿವಾದ ಸ್ಫೋಟಗೊಂಡಿತ್ತಲ್ಲದೇ, ೧೯೯೨ರಲ್ಲಿ ಈ ಮಸೀದಿಯನ್ನು ಹಿಂದೂ ಕಾರ್ಯಕರ್ತರು ಕರಸೇವೆಯ ಮೂಲಕ ಕೆಡವಿದ್ದರು. ಈ ಸಂದರ್ಭ ನಡೆದ ಸಂಘರ್ಷದಲ್ಲಿ ೨ ಸಾವಿರಕ್ಕೂ ಹೆಚ್ಚು ಮಂದಿ ಜೀವ ತೆತ್ತಿದ್ದರು.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ಅವರಿದ್ದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ೧೦೪೫ ಪುಟಗಳ ಐತಿಹಾಸಿಕ ತೀರ್ಪು ನೀಡುವ ಮೂಲಕ ದೀರ್ಘಕಾಲದ ವಿವಾದಕ್ಕೆ ಅಂತಿಮ ತೆರೆ ಎಳೆಯಿತು. ಈ ದಿಸೆಯಲ್ಲಿ ಅಲಹಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸಂವಿಧಾನ ಪೀಠ ಅನುರ್ಜಿತಗೊಳಿಸಿತ್ತು.

ಹಿಂದೂಗಳಲ್ಲಿ ಅಯೋಧ್ಯೆಯಲ್ಲಿಯೇ ಶ್ರೀರಾಮ ಜನಿಸಿದ್ದ ಎಂಬ ನಂಬಿಕೆ ಪ್ರಬಲವಾಗಿದೆ. ಇದಕ್ಕೆ ನ್ಯಾಯಪೀಠದ ಸಹಮತವಿದೆ. ಹೀಗಾಗಿ ಪ್ರಸಕ್ತ ವಿವಾದ ಎಂದು ಹೇಳಲಾಗುವ ಜಾಗಕ್ಕೆ ಶ್ರೀರಾಮನೇ ಯಜಮಾನನಾಗಿದ್ದಾನೆ. ಮಿಗಿಲಾಗಿ ೧೮೫೭ಕ್ಕೂ ಮೊದಲು ಇದೇ ಜಾಗದಲ್ಲಿ ಮಸೀದಿ ಇತ್ತು ಎಂಬುದು ಸಾಬೀತಾಗಿಲ್ಲ. ಹೀಗಾಗಿ ಇಲ್ಲಿ ಮಸೀದಿ ಇದ್ದ ಸಾಕ್ಷö್ಯಗಳು ಯಾವುದೂ ನ್ಯಾಯಪೀಠದ ಮುಂದೆ ದೃಢಪಟ್ಟಿಲ್ಲ ಎಂಬುದನ್ನು ಸಂವಿಧಾನ ಪೀಠ ತನ್ನ ತೀರ್ಪಿನಲ್ಲಿ ಒತ್ತಿ ಹೇಳಿತ್ತು.

ಅಯೋಧ್ಯೆಯ ಶ್ರೀರಾಮ ಜಮೀನಿನ ಮೇಲೆ ತಮ್ಮ ವಾರಸುದಾರಿತ್ವ ಕೋರಿ ನಿರ್ವೋಹಿ ಅಖಾಡ ಸುನ್ನಿ ವಕ್ಫ್ ಬೋರ್ಡ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಸಿವಿಲ್ ದಾವೆಗಳನ್ನೂ ನ್ಯಾಯಪೀಠ ಪರಿಗಣಿಸಿರಲಿಲ್ಲ.

೧೩೪ ವರ್ಷಗಳಲ್ಲಿ ನಾನಾ ಹಂತದ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದಿದ್ದ ಶ್ರೀರಾಮ ಜನ್ಮಭೂಮಿ ಪ್ರಕರಣ ಸಂಬAಧಿತ ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠ ಒಮ್ಮತದ ತೀರ್ಪು ನೀಡಿತ್ತು.

- ೨.೭೭ ಎಕ್ರೆ ವಿವಾದಿತ ಭೂಮಿ ರಾಮನಿಗೆ ಸಲ್ಲಬೇಕು. ಮಸೀದಿಗೆ ಹಾನಿ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆಕ್ಷೇಪ ವ್ಯಕ್ತಪಡಿಸಿದ್ದ ಪೀಠವು. ಕಾನೂನು ಕೈಗೆತ್ತಿಕೊಂಡು ಬಾಬರಿ ಮಸೀದಿ ಕೆಡವಿದ್ದು ಸರ್ವಥ ಸರಿಯಲ್ಲ.

- ಹಿಂದೂಗಳ ನಂಬಿಕೆಯು ವಿವಾದರಹಿತವಾದದ್ದು. ಹಿಂದೂಗಳು ಅಯೋಧ್ಯೆಯನ್ನು ಶ್ರೀರಾಮನ ಜನ್ಮಸ್ಥಾನ ಎಂದು ನಂಬಿದ್ದಾರೆ. ಈ ವಿಚಾರದಲ್ಲಿ ಹಿಂದೂಗಳಿಗೆ ಧಾರ್ಮಿಕ ಭಾವನೆಗಳಿವೆ. ಹೀಗಾಗಿ ಮುಸ್ಲಿಂ ಸಮುದಾಯವರು ತಮ್ಮದು ಈ ಜಾಗ, ಇದು ಬಾಬರಿ ಮಸೀದಿಯದ್ದು ಎಂದಿದ್ದಾರೆ. ಹಿಂದೂಗಳಿಗೆ ಶ್ರೀರಾಮ ಇಲ್ಲಿ ಜನಿಸಿದ್ದ ಎಂಬ ನಂಬಿಕೆಯು ವಿವಾದರಹಿತವಾಗಿದೆ.

- ಪುರಾತತ್ವ ಇಲಾಖೆಯ ಶೋಧನೆಯನ್ನು ಮಾನ್ಯ ಮಾಡಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಬಾಬರಿ ಮಸೀದಿಯನ್ನು ಖಾಲಿ ಜಮೀನಿನಲ್ಲಿ ನಿರ್ಮಿಸಿದ್ದಲ್ಲ. ಅಲ್ಲಿ ದೊಡ್ಡದಾದ ಕಟ್ಟಡ ಇತ್ತು. ಆ ಕಟ್ಟಡವು ಇಸ್ಲಾಮಿಕ್ ಮೂಲದ್ದೂ ಆಗಿರಲಿಲ್ಲ ಎಂದು ಪುರಾತತ್ವ ಇಲಾಖೆಯ ಸಂಶೋಧನೆ ತಿಳಿಸಿದೆ. ಬಾಬರಿ ಕಟ್ಟಡದ ಅಡಿಯಲ್ಲಿ ಇಸ್ಲಾಂಯೇತರ ಕಟ್ಟಡದ ಅವಶೇಷಗಳು ಪತ್ತೆಯಾಗಿದ್ದವು. ಮಂದಿರವನ್ನು ದ್ವಂಸ ಮಾಡಿರುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ರಾಮ ಇಲ್ಲಿಯೇ ಜನಿಸಿದ್ದ ಎಂಬುದು ಹಿಂದೂಗಳ ನಂಬಿಕೆಯಾಗಿದೆ.

ನಿರ್ವೋಹಿ ಅಖಾಡದ ಅರ್ಜಿ ವಜಾ - ರಾಮಲಲ್ಲಾ ಮುಖ್ಯ ಅರ್ಜಿದಾರ ಎಂದು ಸರ್ವೋಚ್ಚ ನ್ಯಾಯಾಲಯ ಮಾನ್ಯ ಮಾಡಿತ್ತು. ನಿರ್ವೋಹಿ ಅಖಾಡಕ್ಕೆ ಪೂಜೆಯ ಅಧಿಕಾರ ಇಲ್ಲ. ಕಂದಾಯ ದಾಖಲೆ ಪ್ರಕಾರ ಇದಾಗಿದ್ದು ವಿವಾದಿತ ಜಮೀನು ಸರ್ಕಾರದ ಜಾಗವಾಗಿತ್ತು. ಮಸೀದಿಯ ಅಡಿಪಾಯದಲ್ಲಿ ವಿಶಾಲವಾದ ರಚನೆ ಕಂಡು ಬಂದಿದೆ. ಇದು ಇಸ್ಲಾಂ ಶೈಲಿಯದ್ದಾಗಿರಲಿಲ್ಲ. ಆದರೆ ಮಂದಿರ ಕೆಡವಿ ಮಸೀದಿ ಕಟ್ಟಲಾಗಿದೆ ಎಂಬ ಅಂಶದ ಬಗ್ಗೆಯೂ ಖಚಿತತೆ ಇಲ್ಲ.

ಶ್ರೀರಾಮಜನ್ಮ ಸ್ಥಾನದ ದರ್ಶನ ಮಾಡುವುದು ಮತ್ತು ಇಲ್ಲಿ ಧಾರ್ಮಿಕ ವಿಧಿಗಳ ಆಚರಣೆಯಿಂದ ಸದ್ಗತಿ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ಕಾರಣಕ್ಕಾಗಿ ಹಿಂದೂಗಳಿಗೆ ಇದು ಅತ್ಯಂತ ಮಹತ್ವದ ಸ್ಥಾನವಾಗಿದೆ. ಇದು ಹಿಂದೂಗಳ ಪವಿತ್ರ ಗ್ರಂಥಗಳ ಆಧಾರದ ಮೇಲೆ ನಿಂತಿರುವ ನಂಬಿಕೆಯಾಗಿದೆ. ಈ ನಂಬಿಕೆಯನ್ನೂ ಯಾವುದೇ ನ್ಯಾಯಾಲಯದಲ್ಲಿಯೂ ಪರಿಶೀಲನೆಗೆ ಒಳಪಡಿಸಲು ಅಥವಾ ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲದ ಯಾವುದೇ ವ್ಯಕ್ತಿಯಿಂದ ಈ ಬಗ್ಗೆ ಸವಾಲು ಹಾಕಲು ಸಾಧ್ಯವಿಲ್ಲ. ಏಕೆಂದರೆ ಹಿಂದೂಗಳ ನಂಬಿಕೆಯೇ ಭಾರತದ ಸಂವಿಧಾನದ ವಿಧಿ ೨೫ ರ ಅನ್ವಯ ರಕ್ಷಿಸಲ್ಪಟ್ಟಿದೆ.

ಪವಿತ್ರ ಗ್ರಂಥಗಳು ಕೂಡ ಆಧಾರ - ಅಥರ್ವ ವೇದ, ಸ್ಕಂದ ಪುರಾಣ, ನರಸಿಂಹ ಪುರಾಣ, ವಾಲ್ಮೀಕಿ ರಾಮಾಯಣ, ರುದ್ರಮಾಲಾ, ವಸಿಷ್ಠ ಸಂಹಿತೆ, ಗೋಸ್ಟಾಮಿ, ತುಳಸಿದಾಸರ ಶ್ರೀರಾಮಚರಿತ ಮಾನಸ ಮುಂತಾದ ಪವಿತ್ರ ಗ್ರಂಥಗಳು ಶ್ರೀರಾಮ ಜನಿಸಿದ ಸ್ಥಳ ಅಯೋಧ್ಯೆ ಎಂದು ಉಲ್ಲೇಖಿಸಿವೆ. ಅಯೋಧ್ಯೆಯಲ್ಲಿನ ಜಾಗವನ್ನೇ ಶ್ರೀರಾಮನ ಮನೆ ಎಂದು ಈ ಗ್ರಂಥಗಳು ವರ್ಣಿಸಿವೆ. ಅತ್ಯಂತ ಪವಿತ್ರ ಸ್ಥಾನವಾದ ಶ್ರೀರಾಮಜನ್ಮ ಸ್ಥಾನದಲ್ಲಿ ಪೂಜೆ ಮಾಡುವುದರಿಂದ ಭಕ್ತರು, ಮೋಕ್ಷ ಪಡೆಯುತ್ತಾರೆ. ಹೀಗಾಗಿ ಹಿಂದೂ ಧರ್ಮದ ಪವಿತ್ರ ಗ್ರಂಥಗಳು ಶ್ರೀರಾಮಜನ್ಮ ಸ್ಥಾನದಲ್ಲಿ ರೂಢಿಗತ ವಿಧಿ ನೆರವೇರಿಸುವುದನ್ನು ಹಿಂದೂ ಧರ್ಮದ ಅವಿಭಾಜ್ಯ ಭಾಗ ಎಂದು ಉಲ್ಲೇಖಿಸಿದೆ. ಇವೆಲ್ಲ ಅಂಶಗಳನ್ನು ೧೦೪೫ ಪುಟಗಳ ಐತಿಹಾಸಿಕ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.ಸಂವಿಧಾನಿಕ ಪೀಠ ಒಮ್ಮತದ ತೀರ್ಪು ನೀಡಿತ್ತು.

- ೨.೭೭ ಎಕ್ರೆ ವಿವಾದಿತ ಭೂಮಿ ರಾಮನಿಗೆ ಸಲ್ಲಬೇಕು. ಮಸೀದಿಗೆ ಹಾನಿ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆಕ್ಷೇಪ ವ್ಯಕ್ತಪಡಿಸಿದ್ದ ಪೀಠವು. ಕಾನೂನು ಕೈಗೆತ್ತಿಕೊಂಡು ಬಾಬರಿ ಮಸೀದಿ ಕೆಡವಿದ್ದು ಸರ್ವಥ ಸರಿಯಲ್ಲ.

- ಹಿಂದೂಗಳ ನಂಬಿಕೆಯು ವಿವಾದರಹಿತವಾದದ್ದು. ಹಿಂದೂಗಳು ಅಯೋಧ್ಯೆಯನ್ನು ಶ್ರೀರಾಮನ ಜನ್ಮಸ್ಥಾನ ಎಂದು ನಂಬಿದ್ದಾರೆ. ಈ ವಿಚಾರದಲ್ಲಿ ಹಿಂದೂಗಳಿಗೆ ಧಾರ್ಮಿಕ ಭಾವನೆಗಳಿವೆ. ಹೀಗಾಗಿ ಮುಸ್ಲಿಂ ಸಮುದಾಯವರು ತಮ್ಮದು ಈ ಜಾಗ, ಇದು ಬಾಬರಿ ಮಸೀದಿಯದ್ದು ಎಂದಿದ್ದಾರೆ. ಹಿಂದೂಗಳಿಗೆ ಶ್ರೀರಾಮ ಇಲ್ಲಿ ಜನಿಸಿದ್ದ ಎಂಬ ನಂಬಿಕೆಯು ವಿವಾದರಹಿತವಾಗಿದೆ.

- ಪುರಾತತ್ವ ಇಲಾಖೆಯ ಶೋಧನೆಯನ್ನು ಮಾನ್ಯ ಮಾಡಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಬಾಬರಿ ಮಸೀದಿಯನ್ನು ಖಾಲಿ ಜಮೀನಿನಲ್ಲಿ ನಿರ್ಮಿಸಿದ್ದಲ್ಲ. ಅಲ್ಲಿ ದೊಡ್ಡದಾದ ಕಟ್ಟಡ ಇತ್ತು. ಆ ಕಟ್ಟಡವು ಇಸ್ಲಾಮಿಕ್ ಮೂಲದ್ದೂ ಆಗಿರಲಿಲ್ಲ ಎಂದು ಪುರಾತತ್ವ ಇಲಾಖೆಯ ಸಂಶೋಧನೆ ತಿಳಿಸಿದೆ. ಬಾಬರಿ ಕಟ್ಟಡದ ಅಡಿಯಲ್ಲಿ ಇಸ್ಲಾಂಯೇತರ ಕಟ್ಟಡದ ಅವಶೇಷಗಳು ಪತ್ತೆಯಾಗಿದ್ದವು. ಮಂದಿರವನ್ನು ದ್ವಂಸ ಮಾಡಿರುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ರಾಮ ಇಲ್ಲಿಯೇ ಜನಿಸಿದ್ದ ಎಂಬುದು ಹಿಂದೂಗಳ ನಂಬಿಕೆಯಾಗಿದೆ.

ನಿರ್ವೋಹಿ ಅಖಾಡದ ಅರ್ಜಿ ವಜಾ - ರಾಮಲಲ್ಲಾ ಮುಖ್ಯ ಅರ್ಜಿದಾರ ಎಂದು ಸರ್ವೋಚ್ಚ ನ್ಯಾಯಾಲಯ ಮಾನ್ಯ ಮಾಡಿತ್ತು. ನಿರ್ವೋಹಿ ಅಖಾಡಕ್ಕೆ ಪೂಜೆಯ ಅಧಿಕಾರ ಇಲ್ಲ. ಕಂದಾಯ ದಾಖಲೆ ಪ್ರಕಾರ ಇದಾಗಿದ್ದು ವಿವಾದಿತ ಜಮೀನು ಸರ್ಕಾರದ ಜಾಗವಾಗಿತ್ತು. ಮಸೀದಿಯ ಅಡಿಪಾಯದಲ್ಲಿ ವಿಶಾಲವಾದ ರಚನೆ ಕಂಡು ಬಂದಿದೆ. ಇದು ಇಸ್ಲಾಂ ಶೈಲಿಯದ್ದಾಗಿರಲಿಲ್ಲ. ಆದರೆ ಮಂದಿರ ಕೆಡವಿ ಮಸೀದಿ ಕಟ್ಟಲಾಗಿದೆ ಎಂಬ ಅಂಶದ ಬಗ್ಗೆಯೂ ಖಚಿತತೆ ಇಲ್ಲ.

ಶ್ರೀರಾಮಜನ್ಮ ಸ್ಥಾನದ ದರ್ಶನ ಮಾಡುವುದು ಮತ್ತು ಇಲ್ಲಿ ಧಾರ್ಮಿಕ ವಿಧಿಗಳ ಆಚರಣೆಯಿಂದ ಸದ್ಗತಿ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ಕಾರಣಕ್ಕಾಗಿ ಹಿಂದೂಗಳಿಗೆ ಇದು ಅತ್ಯಂತ ಮಹತ್ವದ ಸ್ಥಾನವಾಗಿದೆ. ಇದು ಹಿಂದೂಗಳ ಪವಿತ್ರ ಗ್ರಂಥಗಳ ಆಧಾರದ ಮೇಲೆ ನಿಂತಿರುವ ನಂಬಿಕೆಯಾಗಿದೆ. ಈ ನಂಬಿಕೆಯನ್ನೂ ಯಾವುದೇ ನ್ಯಾಯಾಲಯದಲ್ಲಿಯೂ ಪರಿಶೀಲನೆಗೆ ಒಳಪಡಿಸಲು ಅಥವಾ ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲದ ಯಾವುದೇ ವ್ಯಕ್ತಿಯಿಂದ ಈ ಬಗ್ಗೆ ಸವಾಲು ಹಾಕಲು ಸಾಧ್ಯವಿಲ್ಲ. ಏಕೆಂದರೆ ಹಿಂದೂಗಳ ನಂಬಿಕೆಯೇ ಭಾರತದ ಸಂವಿಧಾನದ ವಿಧಿ ೨೫ ರ ಅನ್ವಯ ರಕ್ಷಿಸಲ್ಪಟ್ಟಿದೆ.

ಪವಿತ್ರ ಗ್ರಂಥಗಳು ಕೂಡ ಆಧಾರ - ಅಥರ್ವ ವೇದ, ಸ್ಕಂದ ಪುರಾಣ, ನರಸಿಂಹ ಪುರಾಣ, ವಾಲ್ಮೀಕಿ ರಾಮಾಯಣ, ರುದ್ರಮಾಲಾ, ವಸಿಷ್ಠ ಸಂಹಿತೆ, ಗೋಸ್ಟಾಮಿ, ತುಳಸಿದಾಸರ ಶ್ರೀರಾಮಚರಿತ ಮಾನಸ ಮುಂತಾದ ಪವಿತ್ರ ಗ್ರಂಥಗಳು ಶ್ರೀರಾಮ ಜನಿಸಿದ ಸ್ಥಳ ಅಯೋಧ್ಯೆ ಎಂದು ಉಲ್ಲೇಖಿಸಿವೆ. ಅಯೋಧ್ಯೆಯಲ್ಲಿನ ಜಾಗವನ್ನೇ ಶ್ರೀರಾಮನ ಮನೆ ಎಂದು ಈ ಗ್ರಂಥಗಳು ವರ್ಣಿಸಿವೆ. ಅತ್ಯಂತ ಪವಿತ್ರ ಸ್ಥಾನವಾದ ಶ್ರೀರಾಮಜನ್ಮ ಸ್ಥಾನದಲ್ಲಿ ಪೂಜೆ ಮಾಡುವುದರಿಂದ ಭಕ್ತರು, ಮೋಕ್ಷ ಪಡೆಯುತ್ತಾರೆ. ಹೀಗಾಗಿ ಹಿಂದೂ ಧರ್ಮದ ಪವಿತ್ರ ಗ್ರಂಥಗಳು ಶ್ರೀರಾಮಜನ್ಮ ಸ್ಥಾನದಲ್ಲಿ ರೂಢಿಗತ ವಿಧಿ ನೆರವೇರಿಸುವುದನ್ನು ಹಿಂದೂ ಧರ್ಮದ ಅವಿಭಾಜ್ಯ ಭಾಗ ಎಂದು ಉಲ್ಲೇಖಿಸಿದೆ. ಇವೆಲ್ಲ ಅಂಶಗಳನ್ನು ೧೦೪೫ ಪುಟಗಳ ಐತಿಹಾಸಿಕ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.