ಸೋಮವಾರಪೇಟೆ, ಜ. ೭: ಇಲ್ಲಿನ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ೨೦೨೩-೨೪ರ ವಾರ್ಷಿಕೋತ್ಸವ ಸಮಾರಂಭ ‘ಕುವೆಂಪು ಕಾರಂಜಿ' ತಾ. ೧೧ರಂದು ಮಧ್ಯಾಹ್ನ ೩ಕ್ಕೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮುಖ್ಯ ಶಿಕ್ಷಕಿ ಮಿಲ್ಸೆçಡ್ ಗೋನ್ಸಾಲ್ವೇಸ್ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಶಾಸಕ ಡಾ. ಮಂಥರ್ ಗೌಡ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಚ್.ಎನ್. ರವೀಂದ್ರ, ಬಿಇಓ ಎಸ್. ಭಾಗ್ಯಮ್ಮ, ತಾಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಬಿ. ಗಣಪತಿ, ಖಜಾಂಚಿ ಜಿ.ಪಿ. ಲಿಂಗರಾಜು ಮತ್ತು ಕರೆಸ್ಪಾಂಡೆAಟ್ ಕೆ.ಎಂ. ಜಗದೀಶ್ ಪಾಲ್ಗೊಳ್ಳಲಿದ್ದಾರೆ.