ಗೋಣಿಕೊಪ್ಪಲು, ಜ. ೭: ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವಂತೆಯೇ ಈ ಬಾರಿಯೂ ಮೀನ್ಯಾರ್ ನಮ್ಮೆ ೨೦೨೪ಅನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮೀನ್ಯಾರ್ ನಮ್ಮೆಯ ಲೋಗೊ ಬಿಡುಗಡೆ ಮಾಡಲಾಗಿದೆ ಎಂದು ಗೋಣಿಕೊಪ್ಪಲುವಿನ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ತಿಳಿಸಿದರು.

ಗೋಣಿಕೊಪ್ಪಲುವಿನ ಸಿಲ್ರ‍್ಸ್ಸ್ಕೆöÊ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಕಾವೇರಿ ಪೊಮ್ಮಕ್ಕಡ ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ ಮಾತನಾಡಿದ ವಿಜು ದೇವಯ್ಯ ಮಾ.೩೧ರಂದು ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ಮೀನ್ಯಾರ್ ನಮ್ಮೆಯನ್ನು ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿದೆ.

ಮಹಿಳೆಯರು ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೊಡವ ಕಲೆ ಸಂಸ್ಕೃತಿ ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಮಹಿಳೆಯರು ಒಟ್ಟಾಗಿ ಸೇರಿ ಮೀನ್ಯಾರ್ ನಮ್ಮೆಯನ್ನು ಆಚರಿಸಿಕೊಂಡು ಬಂದಿದ್ದೇವೆ.

ಈ ಬಾರಿಯೂ ವಿಶೇಷ ರೀತಿಯಲ್ಲಿ ಮುಂಜಾನೆ ೮ ಗಂಟೆಯಿAದ ಸಂಜೆ ೮ ಗಂಟೆಯವರೆಗೆ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಮಹಿಳೆಯರು ತಮ್ಮ ದೈನಂದಿನ ಒತ್ತಡದ ನಡುವೆ ಒಂದು ದಿನ ಸಮಯವನ್ನು ಕಳೆಯುವ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಮುಕ್ಕಾಟಿರ ಬೀನಾ ಪ್ರಸನ್ನ ಮಾತನಾಡಿ, ಮಹಿಳೆಯರು ತಮ್ಮ ಮನೆಯಲ್ಲಿ ಹೂವಿನ ಗಿಡಗಳು ಬೆಳೆಸುವ ಜೊತೆಗೆ ಅನೇಕ ರೀತಿಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಇಂತಹ ಮಹಿಳೆಯರಿಗೆ ಉತ್ತಮ ವೇದಿಕೆ ನಿರ್ಮಾಣ ಮಾಡುವುದು ಹಾಗೂ ಪ್ರೋತ್ಸಾಹಿಸುವುದು ಈ ಹಿಂದಿನಿAದಲೂ ಪೊಮ್ಮಕ್ಕಡ ಕೂಟ ಮಾಡುತ್ತ ಬಂದಿದೆ. ಈ ಬಾರಿಯು ಮಹಿಳೆಯರಿಗೆ ಉತ್ತೇಜನ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸಹ ಕಾರ್ಯದರ್ಶಿ ಚೊಟ್ಟೆಕಾಳಪಂಡ ಆಶಾಪ್ರಕಾಶ್ ಮಾತನಾಡಿ, ಕಾವೇರಿ ಪೊಮ್ಮಕ್ಕಡ ಕೂಟದಲ್ಲಿ ನೂರಾರು ಮಹಿಳಾ ಸದಸ್ಯರು ನೊಂದಾವಣೆಯಾಗಿದ್ದು ವಾರ್ಷಿಕವಾಗಿ ಹಲವು ಕಾರ್ಯಕ್ರಮದ ಮೂಲಕ ಸದಸ್ಯರು ಸಮಾಗಮಗೊಳ್ಳುತ್ತಿದ್ದಾರೆ. ಇಂತಹ ವೇದಿಕೆಯನ್ನು ಪೊಮ್ಮಕ್ಕಡ ಕೂಟ ರೂಪಿಸುತ್ತಿದೆ. ಈ ಬಾರಿ ಕೊಡವ ಕಲೆ ಸಂಸ್ಕೃತಿಯ ಭಾಗವಾಗಿರುವ ಉಮ್ಮತ್ತಾಟ್, ಬೊಳಕಾಟ್, ಇನ್ನಿತರ ಕಲೆಗಳನ್ನು ಮಕ್ಕಳಿಂದ ಮಾಡಿಸಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಕಲೆಯ ಬಗ್ಗೆ ಜ್ಞಾನ ತುಂಬುವ ಪ್ರಯತ್ನ ನಮ್ಮದಾಗಿದೆ ಎಂದರು.

ಆಡಳಿತ ಮಂಡಳಿ ಸಭೆಯಲ್ಲಿ ಕಾವೇರಿ ಪೊಮ್ಮಕ್ಕಡ ಕೂಟದ ನಿರ್ದೇಶಕರುಗಳಾದ ಮಲ್ಲೆಂಗಡ ಮಮತ ಪೂಣಚ್ಚ, ಆಪಟ್ಟಿರ ಸೌಮ್ಯ ಮೊಣ್ಣಪ್ಪ, ಪರಂದAಡ ಸುಮಿ ಬೋಪಣ್ಣ ಹಾಗೂ ಬಲ್ಯಮೀದೆರಿರ ಆಶಾ ಶಂಕರ್ ಹಾಜರಿದ್ದರು. ಮಾಹಿತಿಗಾಗಿ :೯೪೮೦೬೫೩೧೮೩, ೯೪೪೮೧೩೯೭೩೪, ೯೯೦೦೭೪೧೧೨೦ ಸಂಪರ್ಕಿಸುವAತೆ ಕೋರಿದರು.