ಮಡಿಕೇರಿ, ಜ. ೬: ರಾಮನಗರ ಪಿರಮಿಡ್ ಧ್ಯಾನ ಮಂದಿರ ಹಾಗೂ ವಿವಿಧ ಜಿಲ್ಲೆಗಳ ಪಿರಮಿಡ್ ಕೇಂದ್ರಗಳ ಪಿರಮಿಡ್ ಮಾಸ್ಟರ್ಸ್ಗಳಿಂದ ತಾ.೭ ರಂದು (ಇಂದು) ಮಡಿಕೇರಿಯಲ್ಲಿ ಉಚಿತ ಧ್ಯಾನ ಶಿಬಿರ ನಡೆಯಲಿದೆ.
ನಗರದ ಓಂಕಾರ ಸದನದಲ್ಲಿ ಮಧ್ಯಾಹ್ನ ೩ ರಿಂದ ಸಂಜೆ ೬ರತನಕ ನಡೆಯಲಿರುವ ಶಿಬಿರದ ಅಧ್ಯಕ್ಷತೆಯನ್ನು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಮಡಿಕೇರಿ ಟೌನ್ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಪಿ. ಕೃಷ್ಣರಾಜು ಪಾಲ್ಗೊಳ್ಳಲಿದ್ದಾರೆ ಎಂದು ಶಿಬಿರದ ಸಂಯೋಜಕ ಹೆಚ್.ಎಂ. ಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.