ನಾಪೋಕ್ಲು, ಜ. ೬: ಇಲ್ಲಿನ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯ ಹಾಗೂ ಚಟುವಟಿಕೆಗಳು ಶ್ಲಾಘ ನೀಯವಾಗಿದೆ. ಸಂಸ್ಥೆಯ ಎಲ್ಲರೂ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಂಸ್ಥೆಯ ರಾಜ್ಯಪಾಲ ಡಾ. ಮೆಲ್ವಾನ್ ಡಿಸೋಜ ಹೇಳಿದರು.
ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯಪಾಲರ ಭೇಟಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಲಿಯೋ ಸಂಸ್ಥೆಯ ಸದಸ್ಯರು ಹಿರಿಯರ ಆದರ್ಶವನ್ನು ಮೈಗೂಡಿಸಿ ಕೊಂಡು ಸಾಧನೆ ಗುರಿ ಇರಿಸಿ ಕೊಂಡು ಉನ್ನತಿಯನ್ನು ಹೊಂದ ಬೇಕು ಎಂದ ಅವರು ಕ್ಲಬ್ಬಿನ ಧ್ಯೇಯೋದ್ದೇಶ ಬಗ್ಗೆ ಬೆಳಕು ಚೆಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಕನ್ನಂಬೀರ ಸುಧಿ ತಿಮ್ಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಓಸ್ವಾಲ್ ಡಿಸೋಜಾ, ಕೋಶಾಧಿಕಾರಿ ಸುಧಾಕರ್ ಶೆಟ್ಟಿ, ಪ್ರಾಂತಿಯ ಅಧ್ಯಕ್ಷ ನವೀನ್ ಅಂಬೆಕಲ್ಲು, ವಲಯ ಅಧ್ಯಕ್ಷ ಬಾಲಕೃಷ್ಣ, ರೋಹಿತ್ ಸಿ.ಕೆ., ನಾಪೋಕ್ಲು ಲಯನ್ಸ್ ಕಾರ್ಯದರ್ಶಿ ಎಂ.ಬಿ. ಕುಟ್ಟಪ್ಪ, ಖಜಾಂಚಿ ಬನ್ಸಿ ಭೀಮಯ್ಯ, ಲಿಯೋ ಸಂಸ್ಥೆಯ ಅಧ್ಯಕ್ಷ ಕೆ.ಸಿ. ಗೌರಮ್ಮ ಕೆ.ಸಿ., ಕಾರ್ಯದರ್ಶಿ ಮಹಮ್ಮದ್ ರಜಿನ್, ಖಜಾಂಚಿ ಮಾನ್ಯ ಕಾವೇರಮ್ಮ ಉಪಸ್ಥಿತರಿದ್ದರು. ರೇಖಾ ಪೊನ್ನಣ್ಣ ಪ್ರಾರ್ಥಿಸಿ, ಸುಧಿ ತಿಮ್ಮಯ್ಯ ಸ್ವಾಗತಿಸಿದರು. ಗೌರಮ್ಮ ಕೆ.ಸಿ. ವಂದಿಸಿದರು.