ಮಡಿಕೇರಿ, ಜ. ೫: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪುಷ್ಪಗಿರಿ ವನ್ಯಜೀವಿ ವಲಯದ ಮಾಂದಲ್‌ಪಟ್ಟಿ ವೀಕ್ಷಣಾ ಗೋಪುರಕ್ಕೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಾಡಿಗೆ ಜೀಪ್‌ಗಳ ಓಡಾಟಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆ ‘ಬ್ರೇಕ್’ ಹಾಕಿದ ಬೆನ್ನಲ್ಲೇ ಇದೀಗ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅರಣ್ಯ ಇಲಾಖೆ ಪರ್ಮಿಟ್ ನೀಡಿದೆ.

ನಿಯಮ ಉಲ್ಲಂಘನೆ ಹಾಗೂ ದುಪ್ಪಟ್ಟು ಬಾಡಿಗೆ ವಸೂಲಿ ಮಾಡುತ್ತಿರುವ ಆರೋಪದ ಮೇರೆಗೆ ಕಾರ್ಯಾಚರಣೆ ನಡೆಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದ ನಾಲ್ಕು ಕ್ಯಾಂಪರ್ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಮೊಕದ್ದಮೆ ದಾಖಲಿಸಿದ್ದಾರೆ. ಅಲ್ಲದೆ, ಹಳದಿ ಬಣ್ಣದ ಫಲಕಕ್ಕೆ ಮಾರ್ಪಾಡು ಮಾಡಿಕೊಂಡು ಬಾಡಿಗೆ ಮಾಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಜೀಪುಗಳ ಓಡಾಟ ಸ್ಥಗಿತಗೊಂಡಿದೆ.

ದ್ವಿಚಕ್ರ ವಾಹನಕ್ಕೆ ಅನುಮತಿ

ಈ ನಡುವೆ ಪುಷ್ಪಗಿರಿ ವನ್ಯಜೀವಿ ವಲಯದ ಮಾಂದಲ್‌ಪಟ್ಟಿ ವೀಕ್ಷಣಾ ಗೋಪುರಕ್ಕೆ ತೆರಳುವ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ತಾ. ೧೯.೧೧.೨೦೨೨ರಿಂದ ಕಾಮಗಾರಿ ಮುಕ್ತಾಯಗೊಳ್ಳುವವರೆಗೆ ಮಾಂದಲ್‌ಪಟ್ಟಿಗೆ ತೆರಳುವ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳ ಓಡಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಇದೀಗ ರಸ್ತೆ ದುರಸ್ತಿಕಾರ್ಯ ಮುಕ್ತಾಯ ಗೊಂಡಿರುವುದರಿAದ ಅರಣ್ಯ ಇಲಾಖೆ ವತಿಯಿಂದ ದ್ವಿಚಕ್ರ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಈ ಸಂಬAಧ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಹಳದಿ ಜೀಪುಗಳ ಓಡಾಟ

ಬಿಳಿ ಫಲಕಗಳನ್ನು ಹೊಂದಿರುವ ಜೀಪುಗಳ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ ಇದೀಗ ಹಳದಿ ಫಲಕ ಹೊಂದಿರುವ ಬೆರಳೆಣಿಕೆಯಷ್ಟು ಜೀಪುಗಳು ಮಾತ್ರ ಮಾಂದಲ್‌ಪಟ್ಟಿಯತ್ತ ಸಂಚಾರ ಮಾಡುತ್ತಿವೆ. ಮಾಂದಲ್‌ಪಟ್ಟಿಗೆAದೇ ಬರುತ್ತಿರುವ ಪ್ರವಾಸಿಗರು ತಮ್ಮ ವಾಹನದಲ್ಲಿಯೇ ಪ್ರವೇಶ ದ್ವಾರದವರೆಗೆ ತೆರಳಿ ಮಾಂದಲ್‌ಪಟ್ಟಿ ಪ್ರದೇಶದಲ್ಲಿ ಸುತ್ತಾಡಿ ಹಿಂತಿರುಗುತ್ತಿದ್ದಾರೆ. ಪ್ರತಿನಿತ್ಯ ವಾಹನಗಳ ದಟ್ಟಣೆಯಿಂದ ಗಿಜಿಗಿಡುತ್ತಿದ್ದ ಮಡಿಕೇರಿ ಮುತ್ತಪ್ಪ ದೇವಾಲಯ ಜಂಕ್ಷನ್ ನಂದಿಮೊಟ್ಟೆ, ದೇವಸ್ತೂರು ಪ್ರದೇಶದಲ್ಲೀಗ ಪ್ರಶಾಂತ ವಾತಾವರಣ ಕಂಡುಬರುತ್ತಿದೆ.

? ಸಂತೋಷ್.