ಶನಿವಾರಸಂತೆ, ಜ. ೬: ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ಆಯುಷ್ಮಾನ್ ಭವ ಅಭಿಯಾನದಡಿ ತಾ.೯ ರಂದು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ “ಆರೋಗ್ಯ ಶಿಬಿರ’’ವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಮಕ್ಕಳ ವಿಭಾಗಕ್ಕೆ ಡಾ. ಪಿ.ವೆಂಕಟೇಶ್, ಕಣ್ಣಿನ ವಿಭಾಗಕ್ಕೆ ಡಾ. ನೂತನ್, ಕಿವಿ, ಮೂಗು, ಗಂಟಲು ವಿಭಾಗಕ್ಕೆ ಡಾ. ಮೇಘಾ, ಶಸ್ತç ಚಿಕಿತ್ಸಾ ವಿಭಾಗಕ್ಕೆ ಡಾ. ಅಚಲ್, ಚರ್ಮ ರೋಗ ವಿಭಾಗಕ್ಕೆ ಡಾ. ಎನ್.ವಿವೇಕ್, ಪ್ರಸೂತಿ ಮತ್ತು ಸ್ತಿçÃರೋಗ ವಿಭಾಗಕ್ಕೆ ಡಾ. ಸಿರೀಶ್, ಮಾನಸಿಕ ಆರೋಗ್ಯ ವಿಭಾಗಕ್ಕೆ ಡಾ. ಚೈತ್ರಾ, ಸಮುದಾಯ ವೈದ್ಯಶಾಸ್ತç ವಿಭಾಗಕ್ಕೆ ಡಾ. ಗೌತಮ್ ಸಾಗರ್, ಡಾ. ಗಗನ್, ಡಾ. ಹಿತೈಶ್ರೀ, ಡಾ.ಜಬೀನಾ ಹಾಗೂ ಇತರ ೧೮ ಮಂದಿ ವಿವಿಧ ತಜ್ಞ ವೈದ್ಯರುಗಳು, ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಆರೋಗ್ಯ ಶಿಬಿರದ ಸದು ಪಯೋಗ ಪಡೆದುಕೊಳ್ಳಬೇಕು ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಜಿಲ್ಲಾ ಶಸ್ತç ಚಿಕಿತ್ಸಕ ತಜ್ಞ ಡಾ.ನಂಜುAಡಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.