ಮಡಿಕೇರಿ, ಜ. ೬: ಮೂಲತಃ ಜಿಲ್ಲೆಯವರಾದ ಅಮೇರಿಕಾದ ನಿವೃತ್ತ ಪ್ರೊಫೆಸರ್ ಬ್ಯಾಂಕ್ ಖಾತೆಯಿಂದ ಅವರಿಗೆ ತಿಳಿಯದಂತೆ ರೂ. ೧.೯೭ ಲಕ್ಷ ಡ್ರಾ ಮಾಡಲಾಗಿದೆ.
ಅಮೇರಿಕಾದಲ್ಲಿ ಪ್ರೊಫೆಸರ್ ಆಗಿ ನಿವೃತ್ತರಾಗಿರುವ ಪೊನ್ನಂಪೇಟೆ ತಾಲೂಕು ದೇವನೂರು ಗ್ರಾಮದ ಕೆ.ಬಿ. ಪೂಣಚ್ಚ (೮೫) ಹಣ ಕಳೆದುಕೊಂಡವರಾಗಿದ್ದಾರೆ. ಅಮೇರಿಕಾದಲ್ಲಿ ವಾಸವಿರುವ ಇವರು ಆಗಿಂದಾಗ್ಗೆ ಕೊಡಗಿಗೆ ಬಂದು ಹೋಗುತ್ತಾರೆ. ಅವರು ಕೆನರಾ ಬ್ಯಾಂಕ್ ವೀರಾಜಪೇಟೆ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಅವರು ಕೊಡಗಿಗೆ ಬಂದಾಗ ತಮ್ಮ ಬ್ಯಾಂಕ್ ವಹಿವಾಟನ್ನು ಗಮನಿಸಿದ ವೇಳೆ ಅವರ ಗಮನಕ್ಕೆ ಬಾರದಂತೆ ೨೦೨೩ರ ಫೆ.೨೩ರಿಂದ ಸೆ.೮ರವರೆಗೆ ಹಲವು ಬಾರಿ ಅವರ ಖಾತೆಯಿಂದ ಒಟ್ಟು ೧,೯೭,೩೨೫ ರೂ. ಅಕ್ರಮವಾಗಿ ಡ್ರಾ ಮಾಡಿರುವುದು ಗೊತ್ತಾಗಿದೆ. ಈ ಸಂಬAಧ ಕೊಡಗು ಜಿಲ್ಲಾ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.