ಮಡಿಕೇರಿ, ಜ. ೬: ಸ್ಥಳೀಯ ಲಯನ್ಸ್ ಸಂಸ್ಥೆ ವತಿಯಿಂದ ಮಡಿಕೇರಿ ನಗರದ ಅಬ್ದುಲ್ ಕಲಾಂ ಲೇಔಟ್‌ನಲ್ಲಿ ಇರುವ ಜ್ಞಾನವಿಕಾಸ ವೃದ್ಧಾಶ್ರಮಕ್ಕೆ ಲಯನ್ಸ್ ಗವರ್ನರ್ ಮೇಲ್ವಿನ್ ಡಿಸೋಜಾ ಅವರ ಅಧಿಕೃತ ಭೇಟಿ ಸಂದರ್ಭ ದಿನಬಳಕೆಗೆ ಬೇಕಾದಂತಹ ದಿನಸಿ ಪದಾರ್ಥ ಹಾಗೂ ನಗದು ೫೦೦೦ವನ್ನು ಸಂಸ್ಥೆಯ ವ್ಯವಸ್ಥಾಪಕ ಮಂಜುನಾಥ್ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಪ್ರಾಸ್ತಾವಿಕವಾಗಿ ಮಾತನಾಡಿದ ಲಯನ್ಸ್ ಅಧ್ಯಕ್ಷ ಮಧುಕರ್ ಶೇಟ್ ಮುಂದೆಯೂ ಇದೇ ರೀತಿಯ ಸಹಕಾರವನ್ನು ಲಯನ್ಸ್ನಿಂದ ಕೊಡುತ್ತೇವೆ ಎಂಬ ಆಶ್ವಾಸನೆಯನ್ನು ಕೊಟ್ಟರು. ಈ ಸಂದರ್ಭ ಲಯನ್ಸ್ನ ಪ್ರಾಂತೀಯ ಅಧ್ಯಕ್ಷ ನವೀನ್ ಅಂಬೆಕಲ್, ವಲಯ ಅಧ್ಯಕ್ಷ ರೋಹಿತ್ ಸಿ.ಕೆ., ಸದಸ್ಯರಾದ ಮಹೇಶ್, ನಟರಾಜು ಕೆಸ್ತೂರು, ರವಿ ಎನ್.ಬಿ., ಗೀತಾ ಮಧುಕರ್, ಮೋಹನ್ ಕುಮಾರ್, ಸೋಮಣ್ಣ ಪಿ.ಪಿ., ಜೆ.ವಿ. ಕೋಟಿ, ದಿನೇಶ್ ರಾವ್, ದಾಮೋದರ್ ಕೆ.ಕೆ., ಮೋಹನ್ ದಾಸ್, ಚಾಮ ಲಯನ್ಸ್ ಜಿಲ್ಲಾ ಸಂಪುಟದ ಸದಸ್ಯರಾದ ಓಸ್ವಾಲ್ ಡಿಸೋಜಾ, ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.