ಗೋಣಿಕೊಪ್ಪಲು, ಜ. ೬: ಕೊಡಗಿನ ಹಲವು ಭಾಗದಲ್ಲಿ ಕಾಡಾನೆ ಗಳ ಉಪಟಳ ಮಿತಿ ಮೀರಿದ್ದು ಹಲವು ಸಾವು ನೋವುಗಳು ಸಂಭವಿ ಸುತ್ತಿರುವಂತೆಯೇ ಇದೀಗ ಹಾಡ ಹಗಲೇ ಶಾಲೆಯ ಮುಂದೆ ಮೂರು ಕಾಡಾನೆಗಳು ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ದರ್ಶನ ನೀಡುವ ಮೂಲಕ ಆತಂಕ ಸೃಷ್ಟಿಸಿದೆ. ಶನಿವಾರ ಮುಂಜಾನೆ ೧೦.೩೦ರ ವೇಳೆ ಚೆನ್ನಯ್ಯನಕೋಟೆ ಗ್ರಾ.ಪಂ.ಯ ಚೆನ್ನಂಗಿ ಪ್ರಾಥಮಿಕ ಶಾಲೆಯ ಆವರಣದ ಮುಂಭಾಗದ ಕಾಫಿ ತೋಟದಿಂದ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದವು. ಸಮೀಪದ ಚೆನ್ನಂಗಿ ಅರಣ್ಯ ಪ್ರದೇಶಕ್ಕೆ ತೆರಳಿವೆ. ಆನೆಗಳ ಸಂಚಾರವನ್ನು ಶಾಲೆಯ ಶಿಕ್ಷಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಶನಿವಾರ ಮಧ್ಯಾಹ್ನದ ನಂತರ ಶಾಲೆಗೆ ರಜೆ ಇರುವುದರಿಂದ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಗೆ ತೆರಳುತ್ತಾರೆ.
(ಮೊದಲ ಪುಟದಿಂದ) ಅದೃಷ್ಟವಶಾತ್ ಶಾಲೆ ಬಿಡುವ ಮುನ್ನವೆ ಮೂರು ಕಾಡಾನೆಗಳು ಕಾಫಿ ತೋಟದಿಂದ ಸಮೀಪದ ಅರಣ್ಯ ಪ್ರದೇಶಕ್ಕೆ ಲಗ್ಗೆ ಇಟ್ಟ ಹಿನ್ನೆಲೆಯಲ್ಲಿ ಮುಂದಾ ಗಬಹುದಾಗಿದ್ದ ಅಪಾಯದಿಂದ ಇಲ್ಲಿಯ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರು ಪಾರಾಗಿದ್ದಾರೆ.
ಚೆನ್ನಂಗಿ ಸುತ್ತಮುತ್ತಲಿನ ಪ್ರದೇಶದ ಕಾಫಿ ತೋಟಕ್ಕೆ ಹಾಗೂ ಅರಣ್ಯ ಪ್ರದೇ ಶಕ್ಕೆ ಹೊಂದಿಕೊAಡಿರುವ ಸಾರ್ವಜ ನಿಕರು ಓಡಾಡುವ ರಸ್ತೆಯಲ್ಲಿ ಕಾಡಾನೆ ಗಳು ಆಗಿಂದ್ದಾಗಿಯೇ ಪ್ರತ್ಯಕ್ಷವಾಗಿ ರುವುದರಿಂದ ಸಹಜವಾಗಿಯೆ ಈ ಭಾಗದಲ್ಲಿ ನಾಗರಿಕರಿಗೆ ಕಾಡಾನೆಗಳ ಭಯ ಕಾಡುತ್ತಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯು ಇಳಿಮುಖ ವಾಗುತ್ತಿದೆ. ಕಾಫಿ ತೋಟದಲ್ಲಿ ಕಾಫಿ ಕುಯ್ಲಿನ ಸಮಯ ಆಗಿರುವುದರಿಂದ ಕಾರ್ಮಿಕರು ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಚೆನ್ನಂಗಿ ಸಮೀಪವೇ ಕಾಡಾನೆಗಳ ಉಪಟಳ ತಡೆಯಲು ಅರಣ್ಯ ಪಡೆ ಸಿಬ್ಬಂದಿಗಳು ಕಾರ್ಯನಿರ್ವಹಿಸು ತ್ತಿದ್ದರೂ ಈ ಭಾಗದಲ್ಲಿ ಕಾಡಾನೆಗಳ ಓಡಾಟ ಹೊತ್ತಿಲ್ಲದ ಹೊತ್ತಿನಲ್ಲಿ ನಿರಂತರವಾಗಿ ನಡೆಯುತ್ತಿದೆ. ರಸ್ತೆಯ ಎರಡು ಬದಿಯಲ್ಲಿ ಅರಣ್ಯ ಪ್ರದೇಶವಿ ರುವುದರಿಂದ ಕಾಡಾನೆಗಳು ಎರಡು ಭಾಗದಿಂದ ಸಮೀಪದ ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿವೆ. ಸುತ್ತಮುತ್ತಲಿನ ಗಿರಿಜನ ಹಾಡಿಯಲ್ಲಿ ಮಕ್ಕಳು ಶಾಲೆಗೆ ಬರುವ ವೇಳೆ ಕಾಡಾನೆಗಳ ಭಯ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಿರಿಜನರು ವಾಸಿಸುವ ಹಾಡಿಗಳಿಂದ ಮಕ್ಕಳನ್ನು ಶಾಲೆಗೆ ಬಿಡುವ ಹಾಗೂ ಕರೆದೊಯ್ಯುವ ವ್ಯವಸ್ಥೆಯನ್ನು ಅರಣ್ಯ ಇಲಾಖೆಯು ತಕ್ಷಣದಿಂದ ಜಾರಿಗೆ ತರಬೇಕು. ಇದರಿಂದ ಸುರಕ್ಷಿತವಾಗಿ ಹಾಡಿಯ ಶಾಲಾ ಮಕ್ಕಳು ಶಾಲೆಗೆ ಬರಬಹು ದಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಒತ್ತಾಯಿಸಿದ್ದಾರೆ.
(ಹೆಚ್.ಕೆ.ಜಗದೀಶ್)