ಚೆಯ್ಯಂಡಾಣೆ, ಜ. ೬: ಸಮಾಜ ಕಲ್ಯಾಣ ಇಲಾಖೆ, ವೀರಾಜಪೇಟೆ ತಾಲೂಕು, ಪೊನ್ನಂಪೇಟೆ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರತಿಬಂಧ ಅಧಿನಿಯಮ "ಅಸ್ಪೃಶ್ಯತಾ ನಿವಾರಣಾ" ಕಾರ್ಯಕ್ರಮ ಹಾಗೂ ವಿಚಾರಗೋಷ್ಠಿ ಮತ್ತು ಕಾರ್ಯಾಗಾರವು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ವೀರಾಜಪೇಟೆ ಗ್ರಾಮಾಂತರ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಬೋಪಣ್ಣ ಹಾಗೂ ವಕೀಲ ಸುನಿಲ್ ಕೆ.ವಿ. ಅವರು ಭಾಗವಹಿಸಿ ವಿವಿಧ ಅಧಿನಿಯಮದ ಬಗ್ಗೆ, ಕಾನೂನಿನ ಕುರಿತು, ನಾಗರಿಕ ಹಕ್ಕು ಸಂರಕ್ಷಣಾ ಅದಿನಿಯಮ ೧೯೫೫, ೧೯೭೭ ಮತ್ತು ಪರಿಶಿಷ್ಟ ಜಾತಿ- ವರ್ಗಗಳ ಅಧಿನಿಯಮ ೧೯೮೯ ಹಾಗೂ ೧೯೫೫ ರಡಿ ಮತ್ತು ತಿದ್ದುಪಡಿ ನಿಯಮ ೨೦೧೫ ಅನುಷ್ಠಾನಗೊಳಿಸುವ ಅಸ್ಪೃಶ್ಯತಾ ನಿವಾರಣೆ ಬಗ್ಗೆ ಮಾಹಿತಿ ನೀಡಿದರು. ಕೆದಮುಳ್ಳೂರು ಗ್ರಾ.ಪಂ. ಅಧ್ಯಕ್ಷ ಜಫ್ರಿ ಉತ್ತಪ್ಪ, ವೀರಾಜಪೇಟೆ ಸಬ್ ಇನ್ಸ್ಪೆಕ್ಟರ್ ವಾಣಿ, ಅಭಿವೃದ್ಧಿ ಅಧಿಕಾರಿ ಮಣಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕಮಾದಯ್ಯ, ಗ್ರಾ.ಪಂ. ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಜ್ಯೋತಿಬಾ ಗೌಡರ್ ನಿರೂಪಿಸಿ, ವಾರ್ಡನ್ ಸುಮಯ್ಯ ಕೆ.ಎಂ. ಸ್ವಾಗತಿಸಿ, ವಂದಿಸಿದರು.