ಐಗೂರು, ಜ. ೪: ಐಗೂರು ಪಂಚಾಯಿತಿ ವ್ಯಾಪ್ತಿಯ ಶ್ರೀ ಹರಿಹರ ಯುವಕ ಸಂಘ (ರಿ.) ಕಾಜೂರು ಈ ಸಂಘಕ್ಕೆ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್ ಅವರು ಗ್ರಾಮ ಪಂಚಾಯಿತಿಯ ಅಮೃತ ಗ್ರಾಮ ಯೋಜನೆಯಡಿಯಲ್ಲಿ ರೂ. ೧.೨ ಲಕ್ಷವನ್ನು ಅನುದಾನವಾಗಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ. ಎಸ್. ಪ್ರಮೋದ್, ಸಂಘದ ಅಧ್ಯಕ್ಷ ಜಿ.ಕೆ. ಅವಿಲಾಸ್, ಉಪಾಧ್ಯಕ್ಷ ಟಿ.ಕೆ. ಭಾಸ್ಕರ್, ಕಾರ್ಯದರ್ಶಿ ಟಿ.ಎಸ್. ರಕ್ಷಿತ್, ಖಜಾಂಚಿ ಎಚ್.ಕೆ. ವಸಂತ, ಸಂಘದ ಮಾಜಿ ಅಧ್ಯಕ್ಷರುಗಳಾದ ಎ.ಕೆ. ಶಿವದಾಸ್, ಟಿ.ಬಿ. ಶಶಿ, ಎಂ.ಕೆ. ಮೋಹನ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.