ಸೋಮವಾರಪೇಟೆ, ಜ. ೪: ಹಾಕಿ ಕ್ಷೇತ್ರಕ್ಕೆ ಅದ್ವಿತೀಯ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿರುವ ಸೋಮವಾರಪೇಟೆಯಲ್ಲಿ ಇದೇ ಪ್ರಥಮ ಬಾರಿಗೆ ರಾಷ್ಟಿçÃಯ ಮಟ್ಟದ ಹಾಕಿ ಪಂದ್ಯಾಟ ನಡೆದಿದ್ದು, ಕಳೆದ ೧೦ ವರ್ಷಗಳ ಹಿಂದೆ ಶಂಕುಸ್ಥಾಪನೆ ನೆರವೇರಿ, ನಿನ್ನೆಯಷ್ಟೇ ಉದ್ಘಾಟನೆಗೊಂಡ ಟರ್ಫ್ ಮೈದಾನದಲ್ಲಿ ಹೊರ ರಾಜ್ಯಗಳ ೬ ತಂಡಗಳು ಸೆಣಸಾಡಿದವು.

ಸೋಮವಾರಪೇಟೆಯ ಟರ್ಫ್ ಮೈದಾನದಲ್ಲಿ ಚೊಚ್ಚಲ ಪಂದ್ಯಾಟಕ್ಕೆ ಹಿರಿಯ ಕ್ರೀಡಾಪಟುಗಳು ಚಾಲನೆ ನೀಡಿದರು. ಮೋಡ ಮುಸುಕಿದ ವಾತಾವರಣದಲ್ಲಿ ಪಂದ್ಯಾಟ ಆರಂಭಗೊAಡು, ತುಂತುರು ಮಳೆಯ ನಡುವೆಯೂ ಮುಂದುವರೆಯಿತು. ಮಳೆಯನ್ನೂ ಲೆಕ್ಕಿಸದೇ ಕ್ರೀಡಾಪಟುಗಳು ಮೈದಾನದಲ್ಲಿ ಕ್ರೀಡಾಸ್ಪೂರ್ತಿ ಮೆರೆದರು.

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡಿರುವ ರಾಷ್ಟçಮಟ್ಟದ ೧೭ ವರ್ಷ ವಯೋಮಿತಿಯ ಬಾಲಕಿಯರ ಹಾಕಿ ಲೀಗ್ ಪಂದ್ಯಾವಳಿಗೆ ಚಾಲನೆ ನೀಡುವ ಮೂಲಕ ಸೋಮವಾರಪೇಟೆ ಟರ್ಫ್ನಲ್ಲಿ ಅಧಿಕೃತ ಹಾಕಿ ಕ್ರೀಡೆ ಆರಂಭಗೊAಡಿತು.

ಭಾರತ ಹಾಕಿ ತಂಡದ ಮಾಜೀ ನಾಯಕ ಅರ್ಜುನ್ ಹಾಲಪ್ಪ ಅವರ ತಂದೆ, ಹಿರಿಯ ಹಾಕಿ ಆಟಗಾರರಾದ ಹಾಲಪ್ಪ, ಅಂತರರಾಷ್ಟಿçÃಯ ಆಟಗಾರ ವಿಕ್ರಂಕಾAತ್ ಅವರ ತಂದೆ ಲಕ್ಷಿö್ಮÃಕಾಂತ್ ಸೇರಿದಂತೆ ಹಿರಿಯ ಆಟಗಾರ ಯಶ್ವಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಸೇರಿದಂತೆ ಇತರರು, ಚೊಚ್ಚಲ ಪಂದ್ಯಾಟದಲ್ಲಿ ಭಾಗವಹಿಸಿದ್ದ ಚಂಡೀಗಢ ಮತ್ತು ಉತ್ತರಾಖಂಡ್ ರಾಜ್ಯದ ಬಾಲಕಿಯರಿಗೆ ಹಸ್ತಲಾಘವ ಮಾಡಿ, ಶುಭಹಾರೈಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.

ಮೊದಲ ಲೀಗ್‌ನಲ್ಲಿ ಚಂಡೀಘಡ ತಂಡವು ಉತ್ತರಾಖಂಡ್ ತಂಡವನ್ನು ೫-೦ ಗೋಲುಗಳಿಂದ ಮಣಿಸಿತು. ೨ನೇ ಲೀಗ್‌ನಲ್ಲಿ ಹಿಮಾಚಲಪ್ರದೇಶ ತಂಡವು ಮಥುರಾದ ವಿದ್ಯಾಭಾರತಿ ತಂಡವನ್ನು ೧೨-೦ ಗೋಲುಗಳಿಂದ ಸೋಲಿಸಿತು. ೩ನೇ ಲೀಗ್‌ನಲ್ಲಿ ತೆಲಂಗಾಣ ತಂಡವು ಉತ್ತರಪ್ರದೇಶ ತಂಡದ ವಿರುದ್ಧ ೮-೦ ಗೋಲುಗಳಿಂದ ಸೋಲನುಭವಿಸಿತು. ೪ನೇ ಲೀಗ್‌ನಲ್ಲಿ ಮಧ್ಯಪ್ರದೇಶ ತಂಡವು ಉತ್ತರಾಖಂಡ ತಂಡದ ವಿರುದ್ಧ ೪-೦ ಗೋಲುಗಳ ಅಂತರದಿAದ ಜಯಗಳಿಸಿತು. ೫ನೇ ಲೀಗ್‌ನಲ್ಲಿ ಹಿಮಾಚಲ ಪ್ರದೇಶ ತಂಡವು ತೆಲಂಗಾಣ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ೬ನೇ ಲೀಗ್‌ನಲ್ಲಿ ಉತ್ತರ ಪ್ರದೇಶ ತಂಡವು ವಿದ್ಯಾಭಾರತಿ ತಂಡದ ವಿರುದ್ಧ ೧೨-೦ ಗೋಲುಗಳ ಅಂತರದಿAದ ಜಯಗಳಿಸಿತು.

‘ಮ್ಯಾಚ್ ಅಫೀಷಿಯಲ್ಸ್’ಗಳಾಗಿ ಮಣವಟ್ಟೀರ ಅಯ್ಯಪ್ಪ, ಕರೋಟಿರ ಬೋಪಣ್ಣ, ಕಂಬೀರAಡ ಬೋಪಣ್ಣ, ಶಿವಣ್ಣ, ಶಶಿಧರ್, ಅರುಣ್, ‘ಟೆಕ್ನಿಕಲ್ ಟೇಬಲ್’ನಲ್ಲಿ ಪಾಲಾಕ್ಷ, ರಮೇಶ್, ನಾಗೇಶ್, ಸಂತೊಷ್, ಮೋಹನ್, ಶಿವಶಂಕರ್, ತಾಕೇರಿ ಅಮೃತ್ ಅವರುಗಳು ಕಾರ್ಯನಿರ್ವಹಿಸಿದರು.

‘ಸೊನ್ನೆ’ಯಲ್ಲಿ ‘ಸೋತ’ ಎದುರಾಳಿ ತಂಡಗಳು!

ಸೋಮವಾರಪೇಟೆ ಟರ್ಫ್ನಲ್ಲಿ ನಡೆದ ರಾಷ್ಟಿçÃಯ ಮಟ್ಟದ ಬಾಲಕಿಯರ ೧೭ರ ವಯೋಮಾನದ ಹಾಕಿ ಪಂದ್ಯಾಟದಲ್ಲಿ ಎದುರಾಳಿ ತಂಡಗಳು ೦ ಗೋಲುಗಳಿಂದ ಪರಾಭವಗೊಂಡಿರುವುದು ವಿಶೇಷವಾಗಿದೆ. ವಿಜೇತ ತಂಡಗಳು ಕನಿಷ್ಟ ೨, ಗರಿಷ್ಠ ೧೫ ಗೋಲುಗಳನ್ನು ದಾಖಲಿಸಿದರೆ, ಎದುರಾಳಿ ತಂಡಗಳು ಎಲ್ಲಾ ಪಂದ್ಯಾಟದಲ್ಲೂ ಗಳಿಸಿದ್ದು ‘ಸೊನ್ನೆ’! ಆ ಮೂಲಕ ಪ್ರಥಮ ದಿನದಲ್ಲಿ ನಡೆದ ಪಂದ್ಯಾಟಗಳು ಹೊಸ ದಾಖಲೆಯೊಂದಕ್ಕೆ ಕಾರಣವಾಗಿವೆ. ಹಿಮಾಚಲ ಪ್ರದೇಶ ತಂಡವು ತೆಲಂಗಾಣ ತಂಡವನ್ನು ೨-೦ ಗೋಲುಗಳಿಂದ ಮಣಿಸಿ, ಇಂದಿನ ಪಂದ್ಯಾಟದಲ್ಲಿ ಅತೀ ಕಡಿಮೆ ಗೋಲುಗಳಿಸಿ ವಿಜೇತವಾದ ತಂಡವಾದರೆ, ಉತ್ತರ ಪ್ರದೇಶ ತಂಡವು ಮಥುರಾದ ವಿದ್ಯಾಭಾರತಿ ತಂಡವನ್ನು ೧೫-೦ ಗೋಲುಗಳ ದಾಖಲೆಯ ಅಂತರದಿAದ ಮಣಿಸಿದ ತಂಡವೆAಬ ಕೀರ್ತಿಗೆ ಭಾಜನವಾಗಿದೆ. ಸೋತ ತಂಡಗಳೆಲ್ಲವೂ ‘ಸೊನ್ನೆ’ಗೋಲುಗಳ ದಾಖಲೆ ಬರೆದಿವೆ!

- ವಿಜಯ್ ಹಾನಗಲ್