ಕಡಂಗ, ಜ. ೪: ಭಾಗಮಂಡಲ ಸಮೀಪದ ಚೆರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಬೇಂಗೂರು ಗ್ರಾಮ ಪಂಚಾಯಿತಿ ಸದಸ್ಯ ಬಶೀರ್ ಕೆ.ಎಂ. ಉದ್ಘಾಟಿಸಿದರು.
ಕರಿಕೆಯ ಬೇಕಲ್ ರಮಾನಾಥ್, ಕರಿಕೆ ಸಂಸ್ಥೆಯ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಶಿಕ್ಷಕರು ಉಪಸ್ಥಿತರಿದ್ದರು. ಪರಮೇಶ್ ಸ್ವಾಗತಿಸಿ, ರಮೇಶ್ ವಂದಿಸಿದರು.