ಸುಂಟಿಕೊಪ್ಪ, ಜ. ೪: ರಾಷ್ಟಿçÃಯ ಹೆದ್ದಾರಿಯಲ್ಲಿ ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಬೈಕ್ ಸವಾರ ಪಾರಾದ ಘಟನೆ ನಡೆದಿದೆ.

ಮಡಿಕೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೊಕ್ಸ್ವೇಗಾನ್ (ಕೆಎ೦೫ಎಂಎಸ್೮೪೯೦) ಹಾಗೂ ಸುಂಟಿಕೊಪ್ಪದಿAದ ಮಡಿಕೇರಿಗೆ ಬರುತ್ತಿದ್ದ ಬೈಕ್ (ಕೆಎ೧೩ವೈ೧೫೯೨) ನಡುವೆ ಮಧ್ಯಾಹ್ನ ಬೋಯಿಕೇರಿ ಸಮೀಪ ಭದ್ರಕಾಳೇಶ್ವರಿ ದೇವಸ್ಥಾನದÀ ತಿರುವಿನಲ್ಲಿ ಅಪಘಾತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಬೈಕ್ ಸವಾರ ದೇವರಾಜ್ (ಮುತ್ತು) ಎಂಬವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.