ವೀರಾಜಪೇಟೆ, ಜ. ೪: ವೀರಾಜಪೇಟೆ ವಿವೇಕ ಜಾಗ್ರತ ಬಳಗ ಹಾಗೂ ಶ್ರೀಮಂಗಲ ವಿವೇಕ ಜಾಗ್ರತ ಬಳಗಗಳ ಸಹಯೋಗದಲ್ಲಿ ವೀರಾಜಪೇಟೆಯ ಕಾವೇರಿ ಆಶ್ರಮದ ಸಭಾಂಗಣದಲ್ಲಿ ಸಂತೋಷ ಕೂಟ ಹಾಗೂ ಸಂವರ್ಧನಾ ಕಾರ್ಯಕ್ರಮ ನಡೆಯಿತು.

ಬಳಗದ ಬೆಳವಣಿಗೆಗೆ ಪೂರಕವಾಗಿ ಹಲವಾರು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಡಿವೈನ್ ಪಾರ್ಕ್ನ ಅಧಿಕಾರಿಗಳಾದ ಯಶವಂತ ಹಾಗೂ ಶರತ್‌ಕುಮಾರ ಅವರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ವೀರಾಜಪೇಟೆ ವಿವೇಕ ಜಾಗ್ರತ ಬಳಗದ ಅಧ್ಯಕ್ಷ ಹೆಚ್.ಡಿ. ಲೋಕೇಶ್ ಹಾಗೂ ಶ್ರೀಮಂಗಲ ವಿವೇಕ ಜಾಗ್ರತ ಬಳಗದ ಅಧ್ಯಕ್ಷೆ ಸುಮಿತ್ರ, ಬಳಗದ ಹಿರಿಯರಾದ ಭವಾನಿ ಶಂಕರ್, ಶಶಿಕಲಾ ಭಾಸ್ಕರ್, ಕಾಂಗೀರ ರವಿ ಮಾಚಯ್ಯ, ಬಳಗದ ಗುರುಶ್ರಿ ಸಂದೀಪ್, ಶ್ರೀಮಂಗಲ ಬಳಗದ ವಿವೇಕ, ಡಿ.ಎಸ್. ಕುಮಾರ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.