ಮಡಿಕೇರಿ, ಜ. ೪: ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಜಿಲ್ಲೆಯಲ್ಲಿ ಅಕಾಲಿಕವಾಗಿ ಮಳೆ ಸುರಿಯಲಾರಂಭಿಸಿದ್ದು ಸಮಯವಲ್ಲದ ಸಮಯದಲ್ಲಿನ ಈ ಪರಿಸ್ಥಿತಿ ಜನತೆಯ ಪಜೀತಿಗೆ ಕಾರಣವಾಗಿದೆ. ನಿನ್ನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಜಿಲ್ಲೆಯ ಹಲವಾರು ಭಾಗಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿವೆ.
ಮಳೆಯಿಂದಾಗಿ ಕಾಫಿ ಕುಯಿಲಿನ ಈ ಪರ್ವಕಾಲದಲ್ಲಿ ಬೆಳೆಗಾರರು ತೀರಾ ಸಮಸ್ಯೆ ಎದುರಿಸುತ್ತಿದ್ದಾರೆ. ಅತ್ತ ಕಾಫಿ ಕುಯ್ಯಲು ಆಗದೆ, ಇತ್ತ ಕುಯಿದಿರುವ ಕಾಫಿಯನ್ನು ಕಣದಲ್ಲಿ ಒಣಗಿಸಲು-ರಕ್ಷಿಸಲು ಪರದಾಡು ವಂತಾಗಿದೆ. ಭತ್ತದ ಕೃಷಿಕರಿಗೂ ಭಾರೀ ತೊಂದರೆಯಾಗಿದೆ.
ಈಗಿನ ಅಕಾಲಿಕ ಮಳೆಯಿಂದಾಗಿ ಕಾಫಿ ಹೂ ಬಿಡುವ ಸಾಧ್ಯತೆಯಿದ್ದು, ಮುಂದಿನ ಕೆಲ ದಿನಗಳ ಕಾಲ ಇದು ಬೆಳೆಗಾರರಿಗೆ ಸಮಸ್ಯೆಯಾಗಲಿವೆ ಅಲ್ಲದೆ ಮುಂದಿನ ವರ್ಷದ ಫಸಲಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಮೊದಲೇ ಕಾರ್ಮಿಕರ ಕೊರತೆಯೊಂದಿಗೆ ಇನ್ನಿತರ ಹಲವು ಸಮಸ್ಯೆಗಳಲ್ಲೂ ಇರುವ ಬೆಳೆಗಾರರು ಲಭ್ಯವಿರುವ ಕಾರ್ಮಿಕರಿಗೆ ಕೆಲಸ ನೀಡಲೂ ಹಿಂದೆ-ಮುAದೆ ಯೋಚಿಸುವಂತಾಗಿದೆ. ಇನ್ನೂ ಕೆಲದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ ಎನ್ನಲಾಗುತ್ತಿದೆ. ಈ ವಾತಾವರಣ ಜಿಲ್ಲೆಯಲ್ಲಿ ಇಂದಿನಿAದ ಆರಂಭಗೊAಡಿರುವ ೧೭ರ ವಯೋಮಿತಿಯ ಬಾಲಕಿಯರ ರಾಷ್ಟಿçÃಯ ಹಾಕಿ ಪಂದ್ಯಾವಳಿಗೂ ಅಡಚಣೆಯಾಯಿತು. ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಬೆಳಿಗ್ಗೆ ಸುರಿದ ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಯಿತು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಪರಾಹ್ನದ ಬಳಿಕ ನಿರಂತರವಾಗಿ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಿತು. ಸಂಜೆ ಶಾಲಾ ವಿದ್ಯಾರ್ಥಿಗಳು ಮಳೆಯ ನಡುವೆ ಮನೆಯತ್ತ ಸಾಗುತ್ತಿದ್ದುದು ಕಂಡು ಬಂದಿತು. ಪ್ರಸ್ತುತ ಕೋವಿಡ್ ನಂತಹ ಆತಂಕವಿರುವುದರಿAದ ಮಕ್ಕಳಿಗೆ ಜ್ವರ ಬಂದರೆ ಮುಂದೇನು ಎಂಬ ದುಗುಡವೂ ಪೋಷಕರಲ್ಲಿ ಹೆಚ್ಚಾಗುವಂತಾಗಿದೆ.