ಚೆಯ್ಯಂಡಾಣೆ, ಜ. ೪: ಚೆಯ್ಯಂಡಾಣೆ ಸಮೀಪದ ಚೇಲಾವರದ ಪಟ್ಟಚೆರುವಂಡ ಕುಟುಂಬಸ್ಥರು ವಿವಿಧ ಇಲಾಖೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆಗೈದು ನಿವೃತ್ತಿ ಹೊಂದಿದ ಕುಟುಂಬದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು.

ಪಿ.ಪಿ. ಬೆಳ್ಳಿಯಪ್ಪ ನಿವೃತ ಸಹ ನೋಂದಣಾಧಿಕಾರಿ, ಪಿ.ಬಿ. ಅಯ್ಯಪ್ಪ ನಿವೃತ್ತ ಸೈನಿಕ, ಪಿ.ಎ. ಕಾವೇರಮ್ಮ ನಿವೃತ ಪೊಲೀಸ್, ಪಿ.ಬಿ. ಕಾವೇರಮ್ಮ ನಿವೃತ್ತ ಪ್ರಿನ್ಸಿಪಾಲ್, ಪಿ.ಸಿ. ಜೋಬಿ ಹಾಗೂ ಪಿ.ಎಸ್. ರಾಧಾ ನಿವೃತ್ತ ವಿದ್ಯಾಭ್ಯಾಸ ಇಲಾಖೆ, ಪಿ.ಎಸ್. ಸರಸು ನಿವೃತ್ತ ಮುಖ್ಯ ಶಿಕ್ಷಕಿ, ಪಿ.ಬಿ. ಕುಟ್ಟಪ್ಪ ನಿವೃತ್ತ ಪೊಲೀಸ್, ಪಿ.ಟಿ. ನಂಜಪ್ಪ ನಿವೃತ ಇಂಜಿನಿಯರ್, ಪಿ.ಟಿ. ಅಂಶು ಗಣೇಶ್ ನಿವೃತ್ತ ಹೆಚ್‌ಎಂಟಿ, ಪಿ.ಸಿ. ನವೀನ್ ತಿಮ್ಮಯ್ಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಚೆರುವಂಡ ಪಿ. ಸೋಮಣ್ಣ ವಹಿಸಿದ್ದರು. ಈ ಸಂದರ್ಭ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಸ್ವಾಗತ ಹಾಗೂ ವಂದನೆಯನ್ನು ಪಿ.ಪಿ. ಸುಬ್ಬಯ್ಯ ನೆರವೇರಿಸಿದರು.