ಸಿದ್ದಾಪುರ, ಜ. ೪: ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಸೋಲಾರ್ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಸಿದ್ದಾಪುರದ ಗ್ರಾಮ ಪಂಚಾಯಿತಿಯಲ್ಲಿ ನಡೆದ ಲೆಕ್ಕಪರಿಶೋಧನಾ ಸಭೆ ಹಾಗೂ ಜಮಾಬಂದಿ ಸಭೆಯಲ್ಲಿ ರೂ. ೧೦ ಲಕ್ಷಕ್ಕೂ ಅಧಿಕ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ ಎಂದು ಗ್ರಾ.ಪಂ. ಅಧಿಕಾರಿಗಳು ಪ್ರಸ್ತಾಪಿಸಿದ್ದರು. ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ ಗ್ರಾಮಸ್ಥರು ಜಮಾಬಂದಿ ಸಭೆಗೆ ಆಗಮಿಸಿದ್ದ ನೋಡಲ್ ಅಧಿಕಾರಿ ಹಿಂದುಳಿದ ವರ್ಗ ಇಲಾಖೆಯ ವೀರಾಜಪೇಟೆ ತಾಲೂಕು ಅಧಿಕಾರಿ ಕವಿತಾ ಅವರನ್ನು ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಕವಿತಾ ಅವರು ಇತ್ತೀಚೆಗೆ ಗ್ರಾ.ಪಂ. ಕಚೇರಿಗೆ ಭೇಟಿ ನೀಡಿ, ಕಡತಗಳನ್ನು ಪರಿಶೀಲನೆ ಮಾಡಿದ್ದರು. ನಿನ್ನೆ ದಿನ ಸೋಲಾರ್ ಹಾಗೂ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿರುವ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರ್ಯದರ್ಶಿ ಮೋಹನ್ ಅವರ ಬಳಿ ಮಾಹಿತಿ ಪಡೆದುಕೊಂಡರು. ಪರಿಶೀಲನೆ ವೇಳೆ ಪಂಚಾಯಿತಿಯಲ್ಲಿ ನಮೂದಿಸಿರುವ ಕೆಲವು ಸ್ಥಳಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸದೇ ಇರುವುದು ಕಂಡುಬAದಿದೆ. ಅಧಿಕಾರಿಗೆ ಅಚ್ಚರಿ ಅಲ್ಲದೆ ಸಿ.ಸಿ. ಕ್ಯಾಮರಾಗಳನ್ನು ಕೂಡ ಸಮರ್ಪಕವಾಗಿ ಅಳವಡಿಸದೇ ಇರುವುದು ಪತ್ತೆಯಾಗಿದೆ. ತನಿಖಾಧಿ ಕಾರಿ ಕವಿತಾ ಭೇಟಿ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಗೋಪಾಲ್ ಹಾಗೂ ಕಾರ್ಯದರ್ಶಿ ಮೋಹನ್, ಸಿಬ್ಬಂದಿಗಳಾದ ಈಶ್ವರ, ಇನ್ನಿತರರು ಹಾಜರಿದ್ದರು. ತನಿಖಾಧಿಕಾರಿ ಕವಿತಾ ಬೆಳಗ್ಗಿನಿಂದ ಸಂಜೆಯವರೆಗೆ ತನಿಖೆ ನಡೆಸಿ ಇಓಗೆ ವರದಿ ನೀಡುವುದಾಗಿ ತಿಳಿದುಬಂದಿದೆ. -ವಾಸು ಎ.ಎನ್.