ಸುಂಟಿಕೊಪ್ಪ, ಜ. ೩: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ಕೊಡಗು ಜಿಲ್ಲಾ ಅಕ್ಷರ ಫೌಂಡೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಸರಕಾರಿ ಪ್ರಾಥಮಿಕ ಶಾಲೆಗಳ ೪ ರಿಂದ ೬ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಅವರು ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರಾದ ಹೆಚ್.ಯು. ರಫೀಕ್ ಖಾನ್, ಐ. ಸೋಮನಾಥ್, ಎ. ಶಬೀರ್, ಕೆ.ಕೆ. ಪ್ರಸಾದ್, ಕೆ.ಎಂ. ಆಲಿಕುಟ್ಟಿ, ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ, ಗದ್ದೆಹಳ್ಳ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿÀ ಹೇಮಕುಮಾರಿ ಹಾಗೂ ಶಿಕ್ಷಕಿಯರು ಹಾಗೂ ಇತರರು ಉಪಸ್ಥಿತರಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾರ್ಥಿನಿಯರಾದ ಹಂಸಿಕಾ ಉದಯ ಮತ್ತು ಭುವನೇಶ್ವರಿ ಪ್ರಾರ್ಥಿಸಿದರು.

ಫಲಿತಾಂಶ: ೪ನೇ ತರಗತಿ ವಿಭಾಗದಲ್ಲಿ ಪ್ರಥಮ : ತಪ್ಸೀರ್ ಆರ್. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗದ್ದೆಹಳ್ಳ, ದ್ವಿತೀಯ : ರಿಫಾ ಫಾತೀಮ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸುಂಟಿಕೊಪ್ಪ, ತೃತೀಯ : ಅಫ್ರೀದ್ ಮತ್ತು ಅರ್ಷಕ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗದ್ದೆಹಳ್ಳ.

೫ನೇ ತರಗತಿ ವಿಭಾಗದಲ್ಲಿ ಪ್ರಥಮ : ಕೌಶಲ್ಯ ಆರ್. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗದ್ದೆಹಳ್ಳ ದ್ವೀತಿಯ : ಹಂಸಿಕಾ ಯು. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸುಂಟಿಕೊಪ್ಪ, ತೃತೀಯ : ರಕ್ಷಾ ಹೆಚ್.ಎ. ಮತ್ತು ಈಶ್ವರಿ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸುಂಟಿಕೊಪ್ಪ, ಜಸ್ಮೀತಾ ಎಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗದ್ದೆಹಳ್ಳ

೬ನೇ ತರಗತಿ ವಿಭಾಗದಲ್ಲಿ ಪ್ರಥಮ : ಲಕ್ಷಿö್ಮ್ಮ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸುಂಟಿಕೊಪ್ಪ, ದ್ವಿತೀಯ : ಆಯಿಶಾ ಎಸ್.ಎ. ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸುಂಟಿಕೊಪ್ಪ, ತೃತೀಯ : ಅಯಿಶುತುಲ್ಲಾ ಮಸೂದಾ ಎ. ಮತ್ತು ರಿದಾ ಫಾತೀಮ ಬಿ.ಆರ್. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಂಟಿಕೊಪ್ಪ ಇವರುಗಳು ಬಹುಮಾನಗಳನ್ನು ಪಡೆದುಕೊಂಡರು.