ವೀರಾಜಪೇಟೆ, ಜ. ೨: ವೀರಾಜಪೇಟೆಯ ಲಿಟಲ್ ಸ್ಕಾರ್ರ್ಸ್ ಅಕಾಡೆಮಿ ವತಿಯಿಂದ ಚಿಣ್ಣರ ಕಲವರ -೨ ಎಂಬ ಶೀರ್ಷಿಕೆಯಲ್ಲಿ ಚಿಣ್ಣರ ಕಲಾಕೂಟವನ್ನು ಏರ್ಪಡಿಸಲಾಗಿದೆಯೆಂದು ಅಕಾಡೆಮಿಯ ಅಧ್ಯಕ್ಷೆ ಪೂಜಾ ಸಜೇಶ್ ತಿಳಿಸಿದ್ದಾರೆ.
ಪುಟ್ಟ ಮಕ್ಕಳಲ್ಲಿ ಪ್ರತಿಭೆಗಳನ್ನು ಗುರುತಿಸಿ ವೇದಿಕೆಯ ಬಗೆಗಿನ ಭಯ ಹೋಗಲಾಡಿಸುವುದು ಹಾಗೂ ಮುಕ್ತವಾಗಿ ಯಾವುದೇ ಭಯವಿಲ್ಲದೆ ಪ್ರತಿಭೆಗಳನ್ನು ಪ್ರದರ್ಶಿಸುವುದು ಉದ್ದೇಶವಾಗಿದೆ. ಅಕಾಡೆಮಿಯು ಕಳೆದ ವರ್ಷವೂ ಚಿಣ್ಣರ ಕಲವರ-೧ ಎಂಬ ಹೆಸರಿನಲ್ಲಿ ಕಲಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದೆ. ಅಕಾಡೆಮಿಯು ವಿವಿಧ ದಿನಾಚರಣೆಗಳ ಸಂದರ್ಭ ಮಕ್ಕಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ. ಮಕ್ಕಳ ದಿನಾಚರಣೆ, ಕನ್ನಡ ರಾಜ್ಯೋತ್ಸವ , ಗಾಂಧಿಜಯAತಿ, ಪರಿಸರ ದಿನಾಚರಣೆಗಳನ್ನು ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕ ಪುಟ್ಟ ಮಕ್ಕಳಲ್ಲಿ ಪ್ರಸಕ್ತ ದಿನಗಳಿಗೆ ಹೋಲುವ ನೂತನ ಸಂದೇಶವನ್ನು ಹಸ್ತಾಂತರಿಸುವ ಕೆಲಸ ಮಾಡುತ್ತಾ ಬಂದಿದೆ. ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ.
ಈ ವರ್ಷದ ಕಾರ್ಯಕ್ರಮ ವೀರಾಜಪೇಟೆಯ ಹೊರವಲಯ ಬಿಟ್ಟಂಗಾಲದಲ್ಲಿ ನಡೆಯಲಿದೆ. ಕನ್ನಡ ಚಿತ್ರರಂಗದ ಪ್ರಮುಖರು ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಪಾಶ್ಚಾತ್ಯ ಫ್ಯಾಷನ್ ಶೋ ಸ್ಪರ್ಧೆ , ಪ್ರಾಥಮಿಕ ವಿದ್ಯಾರ್ಥಿಗಳಿಗೆ ರೆಟ್ರೋ ನೃತ್ಯ ಸ್ಪರ್ಧೆ , ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಉಡುಗೆಯೊಂದಿಗೆ ಫ್ಯಾಷನ್ ಶೋ ಸ್ಪರ್ಧೆಗಳು ಎಂದು ವಿಭಜಿಸಲಾಗಿದೆ. ನೋಂದಣಿಗಾಗಿ ಜನವರಿ ೫ ಕೊನೆಯ ದಿನಾಂಕವಾಗಿದೆ. ಮಾಹಿತಿಗಾಗಿ ೮೯೫೧೨೬೨೭೨೩ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿ ಕಾರ್ಯದರ್ಶಿ ಪ್ರತಿಮಾ ರಂಜನ್ ಹೇಳಿದರು. ವೀರಾಜಪೇಟೆಯ ಇಂಟೋಪೀಸ್ ಡ್ಯಾನ್ಸ್ ಶಾಲೆಯು ಕಾರ್ಯಕ್ರಮಕ್ಕೆ ಕೈಜೋಡಿಸಲಿದೆ. ಸಂಸ್ಥೆಯ ವೀರಾಜಪೇಟೆ ಸಂಚಾಲಕ ವಿಷ್ಣು, ತರಬೇತುದಾರ ಮದನ್ ಹಾಜರಿದ್ದರು.