ಕೂಡಿಗೆ, ಜ. ೧ : ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಅಣೆಕಟ್ಟೆಯಿಂದ ಜಿಲ್ಲೆಯ ಮತ್ತು ಪಕ್ಕದ ಜಿಲ್ಲೆಗಳಾದ ಮೈಸೂರು, ಹಾಸನ ಜಿಲ್ಲೆಯ ಆರು ತಾಲೂಕು ವ್ಯಾಪ್ತಿಯ ಬೇಸಾಯಕ್ಕೆ ಸಂಬAಧಿಸಿದAತೆ ಎಡದಂಡೆ ಮತ್ತು ಬಲದಂಡೆಯ ಮೂಲಕ ನೀರನ್ನು ನಾಲೆಯ ಮೂಲಕ ಹರಿಸಲಾಗುತ್ತಿದೆ, ಆದರೆ ಅಣೆಕಟ್ಟೆಯ ಕಾಮಗಾರಿ ಪೂರ್ಣಗೊಂಡು ಮುಖ್ಯ ನಾಲೆಯಿಂದ ನೀರು ಹರಿಯುವ ಆರಂಭದಿAದ ಇದುವರೆಗೂ ಮುಖ್ಯ ನಾಲೆಯ ದುರಸ್ತಿ ಕಾಮಗಾರಿಗಳು ನಡೆಯದೆ, ನಾಲೆಯಲ್ಲಿ ಹೆಚ್ಚು ನೀರು ಸೋರಿಕೆ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಅನೇಕ ಕಡೆಗಳಿಂದ ತೋಡುಗಳ ಮೂಲಕ ನದಿಗೆ ನೀರು ಹರಿಯುತ್ತಿತ್ತು. ಇದರಿಂದಾಗಿ ಮುಖ್ಯ ನಾಲೆಯಲ್ಲಿ ನೀರಿನ ಹರಿಯುವಿಕೆ ಪ್ರಮಾಣವು ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರೂ. ೪೯ ಕೋಟಿ ವೆಚ್ಚದ ಕಾಮಗಾರಿ ಇದೀಗ ಆರಂಭಗೊAಡಿದೆ.
ಹಾರAಗಿಯ ಅಣೆಕಟ್ಟೆಯ ಮುಖ್ಯ ನಾಲೆಯ ಒಂದನೆಯ ತೂಬಿನಿಂದ ಆರನೇ ತೂಬಿನವರೆಗೆ ದುರಸ್ತಿ ಮತ್ತು ಮುಖ್ಯ ನಾಲೆಯ ಮೇಲ್ಬಾಗದಲ್ಲಿ ರಸ್ತೆಯ ನಿರ್ಮಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಕಿರು ಸೇತುವೆ ನಿರ್ಮಾಣ, ಸೇರಿದಂತೆ ಮುಖ್ಯ ನಾಲೆಯ ಎರಡೂ ಬದಿಗಳಲ್ಲಿ ಕಾಂಕ್ರಿಟೀಕರಣ ಮತ್ತು ಮುಖ್ಯ ನಾಲೆಯು ಕಿರಿದಾದ ಸ್ಥಳಗಳಲ್ಲಿ ಬೆಟ್ಟ ಕುಸಿಯದ ಹಾಗೆ, ಆ ಸ್ಥಳದಲ್ಲಿ ಒಳಭಾಗದಲ್ಲಿ ನಾಲೆಯ ನಿರ್ಮಾಣ ಅದೇ ಜಾಗದಲ್ಲಿ ಮೇಲ್ಬಾಗದಲ್ಲಿ ಸಂಪೂರ್ಣವಾಗಿ ಮುಚ್ಚುವಿಕೆಯ ಮೂಲಕ ನಾಲೆಯಲ್ಲಿ ನೀರು ಸರಾಗವಾಗಿ ಹರಿಯಲು, ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಕ್ರಿಯಾ ಯೋಜನೆ ಅನುಗುಣವಾಗಿ ಈಗಾಗಲೇ ಕಾಮಗಾರಿಯು ಹಾರಂಗಿ ಮುಖ್ಯ ನಾಲೆಯ ವ್ಯಾಪ್ತಿಯಲ್ಲಿ ಆರಂಭಗೊAಡಿದೆ.
ಹಾರAಗಿ ಅಚ್ಚುಕಟ್ಟು ಪ್ರದೇಶದ ಬಹುದಿನಗಳ ರೈತರ ಮತ್ತು ಈ ವ್ಯಾಪ್ತಿಯ ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಮತ್ತು ಕಳೆದ ೧೦ ವರ್ಷಗಳಿಂದಲೂ ಸಂಬAಧಿಸಿದ ನೀರಾವರಿ ಸಚಿವರಿಗೆ, ಕಾವೇರಿ ನೀರಾವರಿ ನಿಗಮ ರಾಜ್ಯಮಟ್ಟದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿಯನ್ನು ಸಲ್ಲಿಸಲಾಗಿತ್ತು. ಅದರನ್ವಯ ಕಾವೇರಿ ನೀರಾವರಿ ನಿಗಮದ ಮುಖೇನ ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆಗಳು ನಡೆದು, ಆಂಧ್ರಪ್ರದೇಶ ಅಮೃತ್ ಕನ್ಸ್ಸಕ್ಸ್ö್ನ ಕಂಪೆನಿಯವರು ಟೆಂಡರ್ ಪಡೆದು ಈಗಾಗಲೇ ಹಾರಂಗಿಯ ಮುಖ್ಯ ನಾಲೆಯ ಮೇಲ್ಬಾಗದಲ್ಲಿ ಸಮೀಪದ ರೈತರು ಒತ್ತುವರಿ ಮಾಡಿಕೊಂಡ ಜಾಗವನ್ನು ತೆರವುಗೊಳಿಸುವ ಕಾರ್ಯವನ್ನು ಆರಂಭ ಮಾಡಿರುತ್ತಾರೆ. ಈಗಾಗಲೇ ಮೊದಲ ಹಂತದ ಆಧುನಿಕ ಯಂತ್ರಗಳ ಬಳಕೆ ಮೂಲಕ ಕ್ರಿಯಾ ಯೋಜನೆ ಅನುಗುಣವಾಗಿ ಕಾಮಗಾರಿಯ ಕೆಲಸ ಆರಂಭಗೊAಡಿದೆ.
ಹಾರAಗಿ ಅಣೆಕಟ್ಟೆಯಿಂದ ಮೇ, ತಿಂಗಳುಗಳಿAದ ಅರೆ ಬೇಸಾಯಕ್ಕೆ ಹರಿಸಲಾಗುತ್ತಿದ್ದ ನೀರನ್ನು ಇಂದಿನಿAದ ಸ್ಥಗಿತಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮುಖ್ಯ ನಾಲೆಯ ಒಳಭಾಗ ಪ್ರಮುಖ ಕಾಮಗಾರಿಯ ಕೆಲಸಗಳು ಆರಂಭಗೊಳ್ಳಲಿವೆ. ಮುಂದಿನ ಸಾಲಿನಲ್ಲಿ ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರಿನ ಸರಬರಾಜು ಮಾಡುವ ಎಲ್ಲಾ ಯೋಜನೆ ಅನುಗುಣವಾಗಿ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ಹಾರಂಗಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಇ. ಪುಟ್ಟಸ್ವಾಮಿ ತಿಳಿಸಿದ್ದಾರೆ.