ಪೊನ್ನಂಪೇಟೆ, ಜ. ೨: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನೋಡಲ್ ಅಧಿಕಾರಿ ಜಿ.ಪಂ. ಇಂಜಿನಿಯರಿAಗ್ ಉಪ ವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ.ಕೆ. ಮಹದೇವ್ ಅವರ ಸಮ್ಮುಖದಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸತತವಾಗಿ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಬಗ್ಗೆ ಹಾಗೂ ಜಮ್ಮು ಕಾಶ್ಮೀರದಲ್ಲಿ ನಡೆದ ರಾಷ್ಟಿçÃಯ ಕಾರ್ಯಾಗಾರದಲ್ಲಿ ಭಾಗವಹಿಸಿದ ಬಗ್ಗೆ ಸಭೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಲಾಯಿತು. ಸಭೆಯಲ್ಲಿ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಕುರಿತು ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಕುಶಾಲಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಮ್ಮತ್ತೀರ ವಾಸುವರ್ಮಾ, ಕೆಪಿಎಸ್ ಶಾಲೆ ಮುಖ್ಯ ಶಿಕ್ಷಕ ಬಿ.ಎಂ.ವಿಜಯ್ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಶೌಚಾಲಯ ಸ್ವಚ್ಛಗೊಳಿಸಲು ಗ್ರಾ.ಪಂ. ಪೌರ ಕಾರ್ಮಿಕರನ್ನು ಕಳಿಸಿಕೊಡುವಂತೆ ಮನವಿ ಮಾಡಿದರು.

ರೈತ ಸಂಪರ್ಕ ಕೇಂದ್ರ ಕೃಷಿ ಇಲಾಖೆ ಅಧಿಕಾರಿ ರೀನ ಮಾತನಾಡಿ, ಸೂಪರ್ ಮಾರ್ಕೆಟ್ ಗಳು ಹಾಗೂ ದಿನಸಿ ಅಂಗಡಿಗಳಲ್ಲಿ ಕೃಷಿಗೆ ಸಂಬAಧಿಸಿದ ಕೀಟನಾಶಕಗಳನ್ನು ಮಾರಾಟ ಮಾಡುವ ಬಗ್ಗೆ ದೂರು ಬಂದಿದೆ. ಆಹಾರ ಪದಾರ್ಥಗಳ ಜೊತೆಯಲ್ಲಿ ಕೀಟ ನಾಶಕಗಳನ್ನು ಮಾರಾಟ ಮಾಡುವುದು ಅಪಾಯಕಾರಿಯಾಗಿರುವ ಕಾರಣ, ಲೈಸನ್ಸ್ ಇಲ್ಲದೆ ಕೀಟನಾಶಕ ಮಾರುವ ಅಂಗಡಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಿದರು. ಬಿತ್ತನೆ ಬೀಜ ಪೂರೈಕೆ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಣ ಇಲಾಖೆ ಪರವಾಗಿ ಹಾಜರಿದ್ದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಟಿ.ಕೆ. ವಾಮನ ಅವರಿಗೆ ಗ್ರಾ.ಪಂ. ಸದಸ್ಯ ಮೂಕಳೇರ ಮಧುಕುಮಾರ್ ಪರೀಕ್ಷೆ ಸಮಯದಲ್ಲಿ ಶಿಕ್ಷಕರನ್ನು ಇಲಾಖೆಯ ಬೇರೆ ಬೇರೆ ಕೆಲಸಗಳಿಗೆ ನೇಮಿಸುವುದರಿಂದ, ಪಾಠಗಳು ಹಿಂದುಳಿಯುತ್ತವೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣ ಕಲಿಕೆಗೆ ತೊಂದರೆಯಾಗುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮವಹಿಸಿ ಎಂದು ಸಲಹೆ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ವಿದ್ಯುತ್ ತಂತಿಗಳಿಗೆ ತಾಗಿರುವ ಮರದ ರೆಂಬೆಗಳನ್ನು ಕಡಿದು, ಸಡಿಲ ಗೊಂಡಿರುವ ವಯರ್‌ಗಳನ್ನು ಸರಿಪಡಿಸಿ ಮುಂದಾಗುವ ಅಪಾಯ ತಪ್ಪಿಸುವಂತೆ ಕೆಇಬಿ ಕಿರಿಯ ಇಂಜಿನಿಯರ್ ಹೇಮಂತ್‌ರವರಿಗೆ ಸೂಚಿಸಿದರು.

ನೀರಿನ ಟ್ಯಾಂಕ್ ನಿರ್ಮಿಸಿ, ಟ್ಯಾಂಕ್‌ಗೆ ನೀರಿನ ವ್ಯವಸ್ಥೆ ಮಾಡದಿರುವ ಬಗ್ಗೆ ಮಧುಕುಮಾರ್ ಗ್ರಾಮೀಣ ಕುಡಿಯುವ ನೀರಿನ ಅಭಿವೃದ್ಧಿ ಕೇಂದ್ರದ ಅಧಿಕಾರಿಗಳ ಬಗ್ಗೆ ಮಧುಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಸರಿಪಡಿಸುವುದಾಗಿ ಅಧಿಕಾರಿ ಶಶಿಧರ್ ಸಭೆಗೆ ತಿಳಿಸಿದರು. ಆರೋಗ್ಯ ಇಲಾಖೆ ಪರವಾಗಿ ಹಾಜರಿದ್ದ ಸಮುದಾಯ ಆರೋಗ್ಯ ಅಧಿಕಾರಿ ಸಜಿತ ಅವರು ಕೋವಿಡ್ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ೬೯ ವರ್ಷ ಮೇಲ್ಪಟ್ಟ ನಾಗರಿಕರು ಮಾಸ್ಕ್ ಧರಿಸುವಂತೆ ಸಲಹೆ ನೀಡಿದರು. ತೋಟಗಾರಿಕೆ ಇಲಾಖೆಯ ಬಗ್ಗೆ ಅಧಿಕಾರಿ ಪ್ರಸಾದ್ ಮಾಹಿತಿ ನೀಡಿದರು. ಡಿಜಿಟಲ್ ಗ್ರಂಥಾಲಯದ ಗ್ರಂಥ ಪಾಲಕಿ ವಿದ್ಯಾರ್ಥಿಗಳನ್ನು ಗ್ರಂಥಾಲಯಕ್ಕೆ ಕಳಿಸುವಂತೆ ಶಿಕ್ಷಕರಿಗೆ ತಿಳಿಸಿದರು. ಅರಣ್ಯ ಇಲಾಖೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಅಂಚೆ ಇಲಾಖೆ, ಪಶುವೈದ್ಯ ಇಲಾಖೆ ಸೇರಿದಂತೆ ಬಹುತೇಕ ಇಲಾಖೆ ಅಧಿಕಾರಿಗಳು ಸಭೆಗೆ ಗೈರುಹಾಜರಾಗಿದ್ದರು.

ಸಭೆಯಲ್ಲಿ ಪಿಡಿಓ ಪುಟ್ಟ ರಾಜು, ಗ್ರಾ.ಪಂ. ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ಸದಾ, ಸದಸ್ಯರಾದ ಮೂಕಳೇರ ಸುಮಿತ ಗಣೇಶ್, ಅಣ್ಣೀರ ಹರೀಶ್, ಆಲಿರ ರಶೀದ್, ಮೂಕಳೇರ ಮಧುಕುಮಾರ್, ರಾಮ ಕೃಷ್ಣ, ಕೋಳೆರ ಭಾರತಿ, ಯಮುನಾ, ವಿಜಯಕುಮಾರ್, ಅಮ್ಮತ್ತೀರ ಆರತಿ ಸುರೇಶ್, ಅಬ್ದುಲ್ ಅಜೀಜ್, ಕರ್ತಮಾಡ ರಸಿಕ, ಮಚ್ಚಮಾಡ ಡಿ.ವಿಮಲ, ಸಿ.ಎ. ಜುನೈದ್, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.