ಸಿದ್ದಾಪುರ, ಜ. ೧: ನೆಲ್ಲಿಹುದಿಕೇರಿ ಗ್ರಾಮಕ್ಕೆ ಭಾನುವಾರ ದಂದು ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಭೇಟಿ ನೀಡಿದರು. ನೆಲ್ಲಿಹುದಿಕೇರಿಯಲ್ಲಿ ಇತ್ತೀಚೆಗೆ ಎಸ್‌ಎಸ್‌ಎಫ್ ಸಂಘಟನೆಯ ವತಿಯಿಂದ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಸಮಾರಂಭಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನೆಲ್ಲಿಹುದಿಕೇರಿ ಗ್ರಾಮದ ದಾರುನ್ನಾಜತ್ ಎಜುಕೇಶನ್ ಸಂಸ್ಥೆಗೆ ಭೇಟಿ ನೀಡಿದರು. ನಂತರ ಎಸ್‌ಎಸ್‌ಎಫ್ ಸಂಘಟನೆಯ ಪದಾಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು.

ದಾರುನ್ನಾಜತ್ ವಿದ್ಯಾಸಂಸ್ಥೆ ಯಲ್ಲಿ ಮಾತನಾಡಿ, ವಿದ್ಯಾಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಖಾದರ್ ಅವರು ವಿದ್ಯಾಂಸಸ್ಥೆಗೆ ಮುಂದಿನ ದಿನಗಳಲ್ಲಿ ಸಹಾಯ ಹಸ್ತ ನೀಡುವುದಾಗಿ ಭರವಸೆ ನೀಡಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಬೇಕಾದ ಮೂಲಭೂತ ಸೌಕರ್ಯಗ¼,À ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.ವಿದ್ಯಾಸAಸ್ಥೆಯ ಉಪಾಧ್ಯಕ್ಷ ಎಂ.ಎA. ಮುಸ್ತಫ, ಪ್ರಧಾನ ಕಾರ್ಯದರ್ಶಿ ಪಿ.ಕೆ. ಮುಸ್ತಾಫ, ಜಿಲ್ಲಾ ಎಸ್‌ಎಸ್‌ಎಫ್, ಸಂಘಟನೆಯ ಜಿಲ್ಲಾಧ್ಯಕ್ಷ ಝಬೈರ್ ಸಹದಿ, ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಪ್ಸಲ್, ಹನೀಫ, ಈ.ಹೆಚ್. ಮುಸ್ತಫ ಕೆ.ಎ., ಹಕೀಂ ಎ.ಕೆ. ಹಾಗೂ ಎಸ್‌ಎಸ್‌ಎಫ್, ಎಸ್‌ವೈಎಸ್ ಸಂಘಟನೆಯ ಹಾಗೂ ದಾರುನ್ನಾಜತ್ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು.