ಮಡಿಕೇರಿ, ಜ. ೨: ತಲಕಾವೇರಿ ಯಲ್ಲಿ ಪೂಜಾ ಕ್ರಮ ಅಸಮರ್ಪಕ ಹಾಗೂ ಅತೃಪ್ತಿದಾಯಕವಾಗಿದೆ ಎನ್ನುವ ಆರೋಪ ವ್ಯಕ್ತಗೊಂಡಿದೆ. ಈ ಹಿಂದೆ ತಲಕಾವೇರಿ ಪುನರ್ ಪ್ರತಿಷ್ಠಾಪನಾ ಸಮಿತಿಯಲ್ಲಿ ಪದಾಧಿಕಾರಿಯಾಗಿದ್ದ ಹಾಗೂ ಭಾಗಮಂಡಲ ದೇವಾಲಯಕ್ಕೆ ಮಹಾದ್ವಾರ ಬಾಗಿಲನ್ನು ಕಲ್ಪಿಸಿಕೊಟ್ಟ ಮಡಿಕೇರಿಯ ಮಂಡೀರ ದೇವಿ ಪೂಣಚ್ಚ ಅವರು ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಲಕಾವೇರಿ ಆಡಳಿತ ವ್ಯವಸ್ಥೆ ಅಮರ್ಪಕವಾಗಿದೆ ಎಂದು “ಶಕ್ತಿ” ಯೊಂದಿಗೆ ದೂರಿದ್ದಾರೆ. ಅವರ ಅಭಿಪ್ರಾಯ ಈ ಕೆಳಗಿನಂತಿದೆ.
“ಜ.೧ ರಂದು ಹೊಸ ವರ್ಷದ ಪ್ರಥಮ ದಿನ ಪೂಜೆ ಮಾಡಿಸಲೆಂದು ತೆರಳಿದ್ದೆ. ರೂ. ೨೫೦ ರ ಪೂಜಾ ಟಿಕೆಟ್ ಪಡೆದು ನೀಡಿದಾಗ ಕಾವೇರಿ ಮಾತೆಗೆ ಕುಂಕುಮಾರ್ಚನೆ ನೆರವೇರಿತು. ಆದರೆ, ಅಗಸ್ತೆö್ಯÃಶ್ವರ ಮತ್ತು ಗಣಪತಿ ಗುಡಿಗಳಿಗೆ ತೆರಳಿದಾಗ ನಾನು ಕೇಳಿಕೊಂಡರೂ ಮಂಗಳಾರತಿ ಮಾಡುವುದಿಲ್ಲ ಎಂದು ಅರ್ಚಕರು ಕಡಕ್ ನುಡಿಯಾದರು. ನಾನು ಒತ್ತಾಯಿಸಿದಾಗ ತೀರ್ಥ ತೆಗೆದುಕೊಳ್ಳಿ ಎನ್ನುವ ಉತ್ತರ ಬಂದಿತು. ನನ್ನ ಮನಸ್ಸಿಗೆ ತೀವ್ರ ನೋವಾಯಿತು. ಟಿಕೆಟ್ ತೋರಿಸಿದರೂ ಮಂಗಳಾರತಿ ಮಾಡಿಲ್ಲವೆಂದರೆ ಇದೆಂತಹ ಪೂಜಾ ಕ್ರಮ? ಅರ್ಚಕರಿಗೆ ನಾವು ಪ್ರತ್ಯೇಕ ಕಾಣಿಕೆ ಹಾಕುತ್ತೇವೆ. ಆದರೆ, ದೇವಾಲಯ ಆಡಳಿತ ಮಂಡಳಿಯು ಟಿಕೆಟ್ ಪಡೆದು ಬರುವ ಭಕ್ತಾದಿಗಳಿಗೆ ಕನಿಷ್ಟ ಮಂಗಳಾರತಿ ಮಾಡುವ ವ್ಯವಸ್ಥೆ ಕಲ್ಪಿಸದಿದ್ದರೆ ಇದೆಂತಹ ಪದ್ಧತಿ? ಈ ರೀತಿ ಭಕ್ತಾದಿಗಳಿಗೆ ಅಸಮಾಧಾನ ವಾಗುವಂತಹ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಯವರು ಕೂಡ ಗಮನಿಸಿ ಸರಿಪಡಿಸÀಬೇಕಾಗಿದೆ. ದೇವಾಲಯಕ್ಕೆ ಉತ್ತಮ ಆಡಳಿತ ವ್ಯವಸ್ಥೆ ಕಲ್ಪಿಸ ಬೇಕಾಗಿದೆ. ಸಂಬAಧಿತ ಅರ್ಚಕರಿಗೂ ಸಮರ್ಪಕ ಪೂಜೆ ನಡೆಸಲು ಸೂಕ್ತ ನಿರ್ದೇಶನ ನೀಡಬೇಕಾಗಿದೆ” ಎಂದು ದೇವಿ ಪೂಣಚ್ಚ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.