ಮಡಿಕೇರಿ, ಜ. ೨: ಮಹಾರಾಷ್ಟçದಲ್ಲಿ ಆಯೋಜಿಸಿದ್ದ ಸೌತ್ವೆಸ್ಟ್ ಜೋನ್ ಅಂತರ ವಿಶ್ವವಿದ್ಯಾನಿಲಯದ ಕ್ರೀಡಾಕೂಟದಲ್ಲಿ ಫೆನ್ಸಿಂಗ್ (ಕತ್ತಿವರಸೆ)ನ ಇಪೀ ವಿಭಾಗದಲ್ಲಿ ಕೊಡಗಿನ ಯುವಕ ಕೆಚ್ಚೆಟ್ಟಿರ ವಿಜಯ್ ಉತ್ತಯ್ಯ ಕಂಚಿನ ಪದಕದೊಂದಿಗೆ ಅಖಿಲ ಭಾರತ ಅಂತರ ವಿ.ವಿ. ಫೆನ್ಸಿಂಗ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜ್ ಆಫ್ ಲಾ ದಲ್ಲಿ ೪ನೇ ವರ್ಷದ ಬಿ.ಕಾಂ., ಎಲ್.ಎಲ್.ಬಿ ಓದುತ್ತಿರುವ ಕಡಗದಾಳುವಿನ ನಿವಾಸಿ ಕೆಚ್ಚೆಟ್ಟಿರ ದೇವಯ್ಯ ಹಾಗೂ ವಕೀಲೆ ರೇಷ್ಮಾ ದಂಪತಿಯ ಪುತ್ರ ವಿಜಯ್ ಉತ್ತಯ್ಯ ಫೆನ್ಸಿಂಗ್ನಲ್ಲಿ ಹಲವಷ್ಟು ಸಾಧನೆ ತೋರಿದ್ದಾರೆ. ಇವರು ತಾ.೧೩ರಿಂದ ಅಮೃತ್ಸರದಲ್ಲಿ ನಡೆಯಲಿರುವ ಫೆನ್ಸಿಂಗ್ ಸ್ಪರ್ಧೆ ಹಾಗೂ ತಾ.೨೮ರಿಂದ ಅಸ್ಸಾಂನಲ್ಲಿ ನಡೆಯಲಿರುವ ಸೀನಿಯರ್ ನ್ಯಾಷನಲ್ ಕ್ರೀಡಾಕೂಟದಲ್ಲೂ ಪಾಲ್ಗೊಳ್ಳುತ್ತಿದ್ದಾರೆ.