ಮಡಿಕೇರಿ, ಜ. ೧: ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದ ಪುನರ್ ಪ್ರತಿಷ್ಠಾ ೧೨ನೇ ವಾರ್ಷಿಕೋತ್ಸವವು ತಾ.೧೫ ರಂದು ನಡೆಯಲಿದೆ.

ದೇವಾಲಯದಲ್ಲಿ ಮುಂಜಾನೆಯಿAದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು, ಪೂರ್ವಾಹ್ನ ೭ ಗಂಟೆಗೆ ಮಹಾ ಗಣಪತಿ ಹೋಮ, ೮ ಗಂಟೆಯಿAದ ಶ್ರೀ ಏಕಾದಶ ರುದ್ರಾಭಿಷೇಕ ಆರಂಭಗೊಳ್ಳಲಿದೆ.

ಬೆಳಿಗ್ಗೆ ೯ ಗಂಟೆಯಿAದ ಶ್ರೀ ದೇವಿಗೆ ನವಕಲಶಾಭಿಷೇಕ ಪೂಜೆ, ೧೧ ಗಂಟೆಗೆ ನವಗ್ರಹಗಳಿಗೆ ವಿಶೇಷ ಕಲಶಾಭಿಷೇಕ ಪೂಜೆ, ೧೧.೩೦ ಗಂಟೆಗೆ ನಾಗದೇವರಿಗೆ ವಿಶೇಷ ಪೂಜೆ ಜರುಗಲಿದೆ.

ಮಧ್ಯಾಹ್ನ ೧೨ ಗಂಟೆಗೆ ಮಹಾ ಪೂಜೆ ಹಾಗೂ ತೀರ್ಥಪ್ರಸಾದ ವಿತರಣೆ ನಡೆಯಲಿದ್ದು, ಅಪರಾಹ್ನ ೧ ಗಂಟೆಗೆ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯ ಟ್ರಸ್ಟ್ನ ಪ್ರಮುಖರು ತಿಳಿಸಿದ್ದಾರೆ.