ಪೊನ್ನಂಪೇಟೆ, ಜ. ೨: ಜಾರ್ಖಂಡ್ ರಾಜ್ಯದ ಚಾಂದಿಲ್ನಲ್ಲಿ ನಡೆದ ೩೧ನೇ ಸಬ್ ಜೂನಿಯರ್ ಮತ್ತು ೪೬ ನೇ ಸೀನಿಯರ್ ನ್ಯಾಷನಲ್ ಥ್ರೋಬಾಲ್ ಚಾಂಪಿಯನ್ ಶಿಪ್ನಲ್ಲಿ ಕರ್ನಾಟಕ ಬಾಲಕಿಯರ ತಂಡ ಫೈನಲ್ ಪಂದ್ಯದಲ್ಲಿ ಹರಿಯಾಣದ ವಿರುದ್ಧ ೨೫-೨೪, ೨೫-೨೪ ಅಂಕ ಮತ್ತು ಬಾಲಕರ ತಂಡ ಹರಿಯಾಣ ತಂಡದ ವಿರುದ್ಧ ೨೪-೨೫, ೨೫-೨೨, ೨೫-೨೪ ಅಂಕಗಳಿAದ ಪರಾಭವಗೊಂಡು ರಾಷ್ಟçಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕರ್ನಾಟಕ ಸೀನಿಯರ್ ಬಾಲಕಿಯರ ತಂಡ ಸೆಮಿಫೈನಲ್ನಲ್ಲಿ ಛತ್ತೀಸ್ಘಡ್ ತಂಡದ ವಿರುದ್ಧ ಸೋತು ತೃತೀಯ ಸ್ಥಾನ ಪಡೆದುಕೊಂಡಿದೆ. ತಂಡದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದು, ಬಾಲಕರ ಸೀನಿಯರ್ ವಿಭಾಗದಲ್ಲಿ ದಕ್ಷಿತ್, ದೀಕ್ಷಿತ್ ಸೂರ್ಯ, ಜೂನಿಯರ್ ವಿಭಾಗದಲ್ಲಿ ಮೋನಿಷ್ ದೇವ್, ಜೀವನ್, ಪವಿನ್, ಬಾಲಕಿಯರ ಸೀನಿಯರ್ ವಿಭಾಗದಲ್ಲಿ ಸಿಂಚನ, ಸಂಗೀತ, ಲಕ್ಷಿತ, ಲಾವಣ್ಯ, ಜೂನಿಯರ್ ವಿಭಾಗದಲ್ಲಿ ನಿರೀಕ್ಷ, ಸಫೀನ, ವಿದ್ಯಾ, ದೀವಿಕ, ಶ್ರೇಷ್ಠ ಹಾಗೂ ರಾಜೇಶ್ವರಿ ಸಕ್ರಿಯ ಆಟಗಾರರಾಗಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುತ್ತಾರೆ. ಸೀನಿಯರ್ ವಿಭಾಗದಲ್ಲಿ ಲಾವಣ್ಯ ಮತ್ತು ಜೂನಿಯರ್ ವಿಭಾಗದಲ್ಲಿ ದೀವಿಕ ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ತಂಡದ ಕೋಚ್ ಆಗಿ ವೀರಾಜಪೇಟೆಯ ಸುರೇಶ್ ಟಿ.ವಿ. ಮತ್ತು ಕರ್ನಾಟಕ ಮಹಿಳಾ ತಂಡದ ವ್ಯವಸ್ಥಾಪಕರಾಗಿ ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಅಲಿಮ ಪಿ.ಹೆಚ್. ತಂಡವನ್ನು ಮುನ್ನಡೆಸಿದ್ದರು.