ಮಡಿಕೇರಿ, ಜ. ೨: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ಇವರ ಬಗ್ಗೆ ಮಾಹಿತಿಯಿದ್ದಲ್ಲಿ ತಿಳಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ. ಡಿ.೩೧ರಂದು ಅಲ್ಲಿನ ಗೋದಾಮೊಂದರ ಬಳಿ ಅಂದಾಜು ೪೦-೪೫ ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಅಸ್ವಸ್ಥರಾಗಿ ಬಿದ್ದಿದ್ದು, ಇವರನ್ನು ಪಕ್ಕದ ಮನೆಯವರು ೧೧೨ಗೆ ಮಾಹಿತಿ ನೀಡಿದ್ದಾರೆ. ಬಳಿಕ ಇವರನ್ನು ಶ್ರೀಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪರಾಹ್ನ ಮೃತಪಟ್ಟಿದ್ದಾರೆ. ಈ ಕುರಿತು ದಾಖಲಾಗಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಕಂಟ್ರೋಲ್ ರೂಂ ೨೨೯೦೦೦ ಅಥವಾ ಶ್ರೀಮಂಗಲ ಠಾಣೆ ೯೪೮೦೮೦೪೯೬೦ಗೆ ತಿಳಿಸುವಂತೆ ಕೋರಲಾಗಿದೆ.