ಕೂಡಿಗೆ, ಡಿ. ೩೧: ಇಲ್ಲಿಗೆ ಸಮೀಪದ ಸನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ ೨೦೨೩-೨೪ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ತ್ರೆöÊಮಾಸಿಕ ಸಭೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬAಧಿಸಿದ ಸೌಲಭ್ಯಗಳ ಬಗ್ಗೆ ತಿಳಿಸಿದರು. ವಿವಿಧ ಇಲಾಖೆಗಳ ವತಿಯಿಂದ ಆಗಬೇಕಿರುವ ಕಾರ್ಯಗಳ ಬಗ್ಗೆ ಗ್ರಾಪಂ ಆಡಳಿತ ಮಂಡಳಿ ಸದಸ್ಯರು ಚರ್ಚಿಸಿದರು.
ನಂಜರಾಯಪಟ್ಟಣ ಗ್ರಾಮದಲ್ಲಿ ಪ್ರಮುಖ ಪ್ರವಾಸಿ ತಾಣ ದುಬಾರೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ಕೊರೊನಾ ರೂಪಾಂತರಿ ಜೆಎನ್-೧ ಬಗ್ಗೆ ಎಚ್ಚರ ವಹಿಸಬೇಕಿದೆ. ಗ್ರಾಮದಲ್ಲಿ ಈಗಾಗಲೇ ಕಾಡಾನೆಗಳ ಹಾವಳಿ ಯಿಂದ ಗ್ರಾಮಸ್ಥರು ನಲುಗಿದ್ದಾರೆ. ಇದರ ನಡುವೆ ಹುಲಿಯೊಂದು ಈ ಭಾಗದಲ್ಲಿ ಸಂಚರಿಸುತ್ತಿದೆ. ಈ ಹಿಂದೆ ಹುಲಿ ದಾಳಿಗೆ ಜಾನುವಾರುಗಳು ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಹುಲಿಯಿಂದ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಅಗತ್ಯ ಕ್ರಮ ವಹಿಸುವಂತೆ ಗ್ರಾ.ಪಂ. ಅಧ್ಯಕ್ಷ ಸಿ.ಎಲ್. ವಿಶ್ವ ಅರಣ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು. ಕಾಡಾನೆ ಹಾವಳಿ ತಡೆಗಟ್ಟಲು ಅಳವಡಿಸಿದ್ದ ರೈಲ್ವೇ ಬ್ಯಾರಿಕೆಡ್ ಹಲವು ಕಡೆ ನೆಲಕಚ್ಚಿದ್ದು ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ. ಸೋಲಾರ್ ಫೆನ್ಸಿಂಗ್ ಬಗ್ಗೆ ಗಮನಹರಿಸಬೇಕು. ದುಬಾರೆಯಲ್ಲಿ ತೂಗುಸೇತುವೆಯಿಲ್ಲದೆ ನದಿ ದಾಟುವ ಪ್ರವಾಸಿಗರ ಜೀವಕ್ಕೆ ಸುರಕ್ಷರೆಯಿಲ್ಲ ದಂತಾಗಿದೆ. ತೂಗುಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಮನಸ್ಸು ಮಾಡುತ್ತಿಲ್ಲ. ಪಂಚಾಯಿತಿ ವತಿಯಿಂದ ಪಾರ್ಕಿಂಗ್, ಶೌಚಾಲಯ ಮತ್ತಿತರ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಲಾಗಿದೆ. ನದಿ ದಾಟುವ ಪ್ರವಾಸಿಗರ ಕಾಲುಜಾರಿ ಬೀಳುವ ಮೂಲಕ ದೇಹಕ್ಕೆ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಪ್ರವಾಸಿಗರು, ಸಾರ್ವಜನಿಕರು ಗ್ರಾ.ಪಂ. ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಅವ್ಯವಸ್ಥೆ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಿ ತೂಗುಸೇತುವೆ ನಿರ್ಮಾಣವಾಗುವ ತನಕ ಪ್ರವಾಸಿಗರ ಅನುಕೂಲಕ್ಕೆ ಪರ್ಯಾಯ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕಿದೆ. ಗ್ರಾ.ಪಂ. ವತಿಯಿಂದ ಎರಡು ಮೋಟಾರ್ ಬೋಟ್ ಖರೀದಿಗೆ ತೀರ್ಮಾನಿಸ ಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಗ್ರಾ.ಪಂ. ವ್ಯಾಪ್ತಿಯ ಹಾಡಿ ನಿವಾಸಿಗಳಿಗೆ ಚೆಸ್ಕಾಂ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಲು ಚೆಸ್ಕಾಂ ಕ್ರಮವಹಿಸಬೇಕಿದೆ. ಜಂಗಲ್ ಕಟ್ಟಿಂಗ್ ಮೂಲಕ ಸಂಭಾವ್ಯ ವಿದ್ಯುತ್ ಅವಘಡ ತಪ್ಪಿಸಲು ಮುಂದಾಗುವAತೆ ಸೂಚಿಸಿದರು.
ಜಾನುವಾರುಗಳ ಚಿಕಿತ್ಸೆ, ಸ್ಮಶಾನ, ಕೆರೆಗಳಿಗೆ ದಾರಿ ಸಮಸ್ಯೆ, ಮಳೆಹಾನಿ ಪರಿಹಾರ ಧನ ವಿಳಂಬ, ವೈರಸ್ ಹಾವಳಿ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ, ಪಡಿತರ ಚೀಟಿ, ಗೃಹಲಕ್ಷಿö್ಮ ಯೋಜನೆ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಕುಸುಮ, ಪಿಡಿಓ ರಾಜಶೇಖರ್, ಕಾರ್ಯದರ್ಶಿ ಶೇಷಗಿರಿ ಸೇರಿದಂತೆ ಸದಸ್ಯರುಗಳು ಇದ್ದರು.