ಮಡಿಕೇರಿ, ಡಿ. ೩೦: ಯುಎಇಯಲ್ಲಿ ನೆಲೆಸಿರುವ ಕೊಡಗು ಅರೆಭಾಷೆ ಗೌಡ ಕುಟುಂಬಗಳ ವತಿಯಿಂದ ೨ನೇ ವರ್ಷದ ಹುತ್ತರಿ ಹಬ್ಬವನ್ನು ದುಬೈಯಲ್ಲಿ ಅದ್ದೂರಿ ಯಾಗಿ ಆಚರಿಸಲಾಯಿತು.

ಕಾವೇರಿ ತಾಯಿ ಮತ್ತು ಶ್ರೀ ವೆಂಕಟರಮಣ ಸ್ವಾಮಿ ಪೂಜೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಕಾರ್ಯಕ್ರಮವನ್ನು ಅಚ್ಚಂಡೀರ, ಆನೇರ, ಬೆಳ್ಯನ, ಕಡ್ಲೇರ, ಕಲ್ಲಂಬಿ, ಕರ್ಣಯ್ಯನ, ಕತ್ರಿಕೊಲ್ಲಿ, ಕುದುಪಜೆ ಮತ್ತು ಮೊಟ್ಟನ ಕುಟುಂಬಗಳ ಸದಸ್ಯರು ಆಯೋಜಿಸಿದ್ದರು.

ಯುಎಇಯಲ್ಲಿ ನೆಲೆಸಿರುವ ಎಲ್ಲಾ ಕೊಡಗು ಅರೆಭಾಷೆ ಗೌಡ ಕುಟುಂಬಗಳು ಭಾಗವಹಿಸಿ ಹುತ್ತರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.