ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ವತಿಯಿಂದ ಆಯೋಜಿತವಾಗಿದ್ದ ವಿಶ್ವ ಕೊಡವ ಸಮ್ಮೇಳನ (ಗ್ಲೋಬಲ್ ಸಮ್ಮಿಟ್) ಕಾರ್ಯಕ್ರಮದ ಅಂತಿಮ ದಿನವಾದ ಇಂದು ವೈವಿಧ್ಯಮಯ ಕಾರ್ಯಕ್ರಮಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮದ ಆಕರ್ಷಣೆಗೆ ಪಾತ್ರವಾಯಿತು.

ಕಾರ್ಯಕ್ರಮ ನಡೆದು ಕಾರ್ಯಪ್ಪ ಕಾಲೇಜು ಮೈದಾನ ಹಾಗೂ ಕಾಲೇಜಿನ ಆವರಣದಲ್ಲಿ ಇಂದು ದಿನವಿಡೀ ರಂಗು ರಂಗಿನ ಕಾರ್ಯಕ್ರಮಗಳು, ಮಹತ್ವ ಪೂರ್ಣವಾದ ಚರ್ಚೆಗಳನ್ನು ಒಳಗೊಂಡ ವಿಚಾರಗೋಷ್ಠಿಗಳು, ಕೊಡವ ಜನಪದ ಕಲೆಗಳ ಪ್ರದರ್ಶನಗಳು, ಸ್ಪರ್ಧಾತ್ಮಕ ಪೈಪೋಟಿ ಕೊಡವಾಮೆಯ ಕಲವರವನ್ನು ಇಮ್ಮಡಿಗೊಳಿಸಿತ್ತು.

ಉಮ್ಮತ್ತಾಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಪರೆಯಕಳಿ, ಸಂಮ್ಮAದ ಅಡ್‌ಕ್‌ವೊ, ಚೆರ್‌ಕಥೆಯಂತಹ ಸಾಂಸ್ಕೃತಿಕ ಪೈಪೋಟಿಯಲ್ಲಿ ಕೊಡಗು ಸೇರಿದಂತೆ ಬೆಂಗಳೂರು, ಮೈಸೂರು ಮತ್ತಿತರ ಕಡೆಗಳ ವಿವಿಧ ತಂಡಗಳು ಭಾಗವಹಿಸಿದ್ದರು. ಅಧಿಕ ಸಂಖ್ಯೆಯ ತಂಡಗಳ ಪಾಲ್ಗೊಳ್ಳುವಿಕೆಯಿಂದಾಗಿ ಎಲ್ಲಾ ಕಾರ್ಯಕ್ರಮಗಳು ಸ್ಪರ್ಧಾತ್ಮಕವಾಗಿ ಜರುಗಿದವು.

ವಿಶೇಷವಾಗಿ ನಿರ್ಮಿಸಲಾಗಿರುವ ಐನ್‌ಮನೆಯ ಕಯ್ಯಾಲೆಯಲ್ಲಿ ಸಾಂಪ್ರದಾಯಿಕ ಧಿರಿಸಿನೊಂದಿಗೆ ದುಡಿಕೊಟ್ಟ್ನೊಂದಿಗೆ ನಡೆದ ಬಾಳೋಪಾಟ್ ಸ್ಪರ್ಧೆ ಜನರನ್ನು ಹಿಂದಿನ ಕಾಲದ ಭಾವನಾಲೋಕಕ್ಕೆ ಕರೆದೊಯ್ದಂತಿತ್ತು.

ಮೈದಾನದ ಕೆಳ ಭಾಗದ ಸ್ಥಳದಲ್ಲಿ ಸ್ಪರ್ಧೆಗಳು

(ಮೊದಲ ಪುಟದಿಂದ) ನಡೆದು ಆಯಾತಂಡದ ಸದಸ್ಯರು ಸಮಾಜ, ಸಂಘ ಸಂಸ್ಥೆಗಳ ಬೆಂಬಲಿಗರು ಸ್ಪರ್ಧಾ ಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ಸ್ಪರ್ಧಾ ಕಾರ್ಯಕ್ರಮ ಒಂದೆಡೆಯಾದರೆ ಮೈದಾನದಲ್ಲಿನ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಮೋಪು ಕೂಟ, ಚರ್ಚೆ-ವಿಮರ್ಶೆಗಳ ಮುಂದಿನ ಚಿಂತನೆಗಳ ಕುರಿತಾದ ವಿಚಾರಗೋಷ್ಠಿಯೂ ಅಪರಾಹ್ನದ ತನಕ ನಡೆಯಿತು.

ಇದೇ ವೇಳೆ ವಿಶೇಷ ಸನ್ಮಾನ ಕಾರ್ಯಕ್ರಮವೂ ಜರುಗಿತು. ಅಪರಾಹ್ನದ ನಂತರ ಕ್ರೀಡಾ ವಿಚಾರಗೋಷ್ಠಿ, ಹೆಚ್.ಆರ್. ಟ್ರೆöÊನಿಂಗ್ ಸಮಾವೇಶ, ನಾಗರಿಕ ಸೇವೆ ಹಾಗೂ ಡಿಫೆನ್ಸ್ ಸಮಾವೇಶ, ಕೊಡವ ಸಮಾಜಗಳ ಅಧ್ಯಕ್ಷರುಗಳ ಸಮಾವೇಶ, ಗನ್ ಸಮಾವೇಶ, ಸಂಜೆ ತನಕವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಕರ್ಷಣೆಯ ನಡುವೆ ಜರುಗಿತು.

ರಾತ್ರಿ ಡಿ.ಜೆ. ನೈಟ್‌ನ ಸಂಭ್ರಮದೊAದಿಗೆ ಚೊಚ್ಚಲ ಜಾಗತಿಕ ಕೊಡವ ಸಮ್ಮೇಳನ ಸಾವಿರಾರು ಮಂದಿಯ ತೊಡಗಿಸಿಕೊಳ್ಳು ವದರೊಂದಿಗೆ ಕನೆಕ್ಟಿಂಗ್ ಕೊಡವಾಸ್‌ನ ಪರಿಕಲ್ಪನೆ ಯಶಸ್ಸು ಕಂಡಿತು.

ಐನ್‌ಮನೆಯಿಂದ ಚಾಲನೆ

ಮೂಲನೆಲೆಯ ಹೆಗ್ಗುರುತಾಗಿ ಮೈದಾನದಲ್ಲಿ ನಿರ್ಮಿಸಲಾಗಿದ್ದ ಐನ್‌ಮನೆಯಿಂದ ಚಾಲನೆ ನೀಡಲಾಯಿತು. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ದುಡಿಕೊಟ್ಟ್ ಪಾಟ್, ಕೊಂಬ್‌ಕೊಟ್ಟ್ ವಾಲಗದೊಂದಿಗೆ ಐನ್‌ಮನೆಯಿಂದ ವೇದಿಕೆಯತ್ತ ಮೆರವಣಿಗೆಯ ಮೂಲಕ ಆಗಮಿಸಲಾಯಿತು. ಬಳಿಕ ದೀಪ ಬೆಳಗಿ ಮಿನ್ನಂಡ ಲಾಲಾ ತಿಮ್ಮಯ್ಯ ನೇತೃತ್ವದಲ್ಲಿ ಅಕ್ಕಿ ಹಾಕಿ ಪ್ರಾರ್ಥಿಸಿ ದಿನದ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಆರಂಭದಲ್ಲಿ ವಿವಿಧ ಸ್ಪರ್ಧೆಗಳ ತೀರ್ಪುಗಾರರನ್ನು ವೇದಿಕೆಗೆ ಕರೆಸಿ ಗೌರವಿಸುವ ಮೂಲಕ ಸ್ಪರ್ಧಾ ಕಾರ್ಯಕ್ರಮ ಆರಂಭಗೊAಡಿತು.

ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ಅಧ್ಯಕ್ಷ ಶಾಂತೆಯAಡ ನಿರನ್ ನಾಚಪ್ಪ, ಉಪಾಧ್ಯಕ್ಷ ಪಟ್ರಪಂಡ ಪಂತ್ ಮೊಣ್ಣಪ್ಪ, ಚೋಕಂಡ ಸೂರಜ್, ಚೇಂದAಡ ಶಮ್ಮಿ, ಮಲ್ಲೆಂಗಡ ಸೋಮಣ್ಣ, ಚೊಟ್ಟೆರ ಸಂಜು, ಚೋಕಿರ ಅನಿತಾ, ಕೊಕ್ಕಲೆರ ಶ್ಯಾಮ್, ಪಾಲೇಂಗಡ ಅಮಿತ್ ಭೀಮಯ್ಯ, ನುಚ್ಚಿಮಣಿಯಂಡ ಸುಜಾತ ಮುತ್ತಣ್ಣ, ಓಡಿಯಂಡ ನವೀನ್, ಮುಂಜಾAದಿರ ಕುಟ್ಟಣ್ಣ, ಬೊಳ್ಳೆರ ಪೃಥ್ವಿ, ಮಚ್ಚಮಾಡ ಭವಿನ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ವಿವಿಧ ಸ್ವಯಂ ಸೇವಕರು ಕಾರ್ಯಕ್ರಮದ ಯಶಸ್ಸಿನಲ್ಲಿ ಶ್ರಮಿಸಿದರು.