ಮಡಿಕೇರಿ, ಡಿ. ೩೦: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆಯುತ್ತಿರುವ ರಾಷ್ಟçಮಟ್ಟದ ಬಾಸ್ಕೆಟ್‌ಬಾಲ್‌ಗೆ ಜಿಲ್ಲೆಯ ದೀಪಿಕಾ ಪಿ.ಪಿ ಆಯ್ಕೆಯಾಗಿದ್ದಾಳೆ. ತಾ.೩ ರಿಂದ ಛತ್ತಿಸ್‌ಗಢದ ರಾಜನಂದ್ ಗಾಂವ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ದೀಪಿಕಾ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾಳೆ. ಈಕೆ ೧೦ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಬೆಂಗಳೂರಿನ ವಿದ್ಯಾನಗರದ ಆಙಇS ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಈಕೆ ಜಿಲ್ಲೆಯ ಕುಂದಚೇರಿ ನಿವಾಸಿ ಪೊನ್ನೆಟ್ಟಿ ಪ್ರಸನ್ನ ಹಾಗೂ ಕೇಶ್ವರಿ ದಂಪತಿಯ ಪುತ್ರಿ.