ಗೋಣಿಕೊಪ್ಪಲು, ಡಿ. ೩೦: ಈಜಲು ಬಾರದ ೩ ವಿದ್ಯಾರ್ಥಿಗಳು ಹೊಳೆಗೆ ಇಳಿದ ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಣ ಹೊಳೆಯ ಅರ್ಜಿ ಗುಂಡಿಯಲ್ಲಿ ನಡೆದಿದೆ.

ಮೃತಪಟ್ಟ ಯುವಕರು ಪೊನ್ನಂಪೇಟೆ ಹಳ್ಳಿಗಟ್ಟುವಿನ ಸಿಐಟಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿAಗ್ ವಿದ್ಯಾಭ್ಯಾಸ ಮಾಡುತ್ತಿದ್ದರು. ಮೃತಪಟ್ಟ ಯುವಕರನ್ನು ಶ್ರೀಮಂಗಲದ ಉಳುವಂಗಡ ಸುದೇಶ್ ಅಯ್ಯಪ್ಪ, ಜೋಡುಬೀಟಿಯ ಮಂಗೇಟಿರ ಪಿ. ಆಕಾಶ್ ಬಿದ್ದಪ್ಪ ಹಾಗೂ ವೆಸ್ಟ್ ನೆಮ್ಮಲೆ ಗ್ರಾಮದ ಕುಂಞAಗಡ ಜಿ. ರಶಿಕ್ ಎಂದು ಗುರುತಿಸಲಾಗಿದೆ.

ಶನಿವಾರ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಆಯೋಜನೆಗೊಂಡ ಹಿನ್ನೆಲೆ ಮಧ್ಯಾಹ್ನದ ಬಿಡುವಿನ ಸಮಯದಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ನಾಲ್ವರು ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಬ್ಯಾಗ್ ಹಾಗೂ ಊಟದ ಡಬ್ಬಿಗಳೊಂದಿಗೆ ಬಿ.ಶೆಟ್ಟಿಗೇರಿ ಬಳಿಯ ಅರ್ಜಿಗುಂಡಿಯ ಹೊಳೆಯ ಸೇತುವೆ ಬಳಿ ತೆರಳಿ ತಮ್ಮ ವಾಹನ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಸಮೀಪದ ಹೊಳೆಗೆ ತೆರಳಿದ್ದಾರೆ.

ತಾವು ಧರಿಸಿದ್ದ ಬಟ್ಟೆಗಳನ್ನು ದಡದÀ ಮೇಲಿಟ್ಟು ಈಜಲು ಮೂರು ವಿದ್ಯಾರ್ಥಿಗಳು ಅರ್ಜಿಗುಂಡಿಗೆ ಇಳಿದಿದ್ದಾರೆ. ಇವರೊಂದಿಗೆ ತೆರಳಿದ್ದ ಇನ್ನೋರ್ವ ವಿದ್ಯಾರ್ಥಿ ತನ್ನ ಊಟದ ಡಬ್ಬಿ ತೆಗೆದು ಊಟ ಮಾಡುತ್ತಿದ್ದ. ಈ ವೇಳೆಯಲ್ಲಿ ಈತನ ಮೂವರು ಸ್ನೇಹಿತರು ಹೊಳೆಗೆ ಇಳಿದಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಮೂವರು ನೀರಿನಲ್ಲಿ ಕಣ್ಮರೆ ಯಾಗಿದ್ದಾರೆ.

ಸ್ನೇಹಿತರು ನೀರಿನಿಂದ ಹೊರ ಬಾರದಿರುವುದನ್ನು ಕಂಡು ದಡದಲ್ಲಿದ್ದ ವಿದ್ಯಾರ್ಥಿ ಗಾಬರಿಗೊಂಡು ಘಟನೆ ಬಗ್ಗೆ ಸ್ಥಳೀಯರಿಗೆ ತಿಳಿಸಿದ್ದಾರೆ.

ಗ್ರಾಮಸ್ಥರು ಅರ್ಜಿಗುಂಡಿಗೆ ಪೊಲೀಸರೊಂದಿಗೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಹೊಳೆಯಲ್ಲಿ ಮೂರು ಯುವಕರ ಮೃತದೇಹ ಪತ್ತೆಯಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷÀ ಕೊಲ್ಲೀರ ಬೋಪಣ್ಣ ಹಾಗೂ ಪ್ರಮುಖರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಗ್ರಾಮಸ್ಥರ ಸಹಕಾರದೊಂದಿಗೆ ಪೊಲೀಸರು ಹೊಳೆಯಲ್ಲಿದ್ದ ಮೂರು ಮೃತದೇಹ ವನ್ನು ಹೊರತೆಗೆದರು.

ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಹೆಚ್.ಕೆ. ಜಗದೀಶ್