ಸಿದ್ದಾಪುರ, ಡಿ. ೩೦: ಸಿದ್ದಾಪುರದ ಶ್ರೀ ದುರ್ಗಾಭಗವತಿ ದೇವಾಲಯದ ತಿರು ಮಹೋತ್ಸವ ಪೂಜಾ ಕೈಂಕರ್ಯಗಳು ಜ. ೩ ರಿಂದ ಜ. ೬ ರವರೆಗೆ ನಡೆಯಲಿದೆ. ಬ್ರಹ್ಮಶ್ರೀ ಈಡವಲತ್ ಪುಡಯೂರ್‌ಮನ ಕುಬೇರನ್ ನಂಬೂದರಿಪಾಡ್ ತಂತ್ರಿಗಳ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು ಜ. ೩ ರಂದು ಸಂಜೆ ೫.೩೦ ಕ್ಕೆ ಪುಣ್ಯಾಹ ಪ್ರಾಸ ಶುದ್ದಿ, ವಾಸ್ತು ಬಲಿ, ದೀಪಾರಾಧನೆ, ತ್ರಿಕೊಡಿಯೆಟಂ, ಅತ್ತಾಯ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ಜ. ೪ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾಪೂಜೆ, ಮಹಾ ಸುದರ್ಶನ ಹೋಮ, ಮಹಾ ಮೃತ್ಯುಂಜಯ ಹೋಮ, ನವಗಂ ಪಂಚಗವ್ಯA, ಕಲಶಭಿಷೇಕ ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಭಗವತಿ ಸೇವೆ, ದೀಪಾರಾಧನೆ ಸಹಸ್ರ ದೀಪಾ, ಮಹಾಪೂಜೆ, ಅನ್ನದಾನ ನಡೆಯಲಿದೆ.

ಜ ೫ ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾಪೂಜೆ, ಗುಳಿಗ, ನಾಗದೇವರಿಗೆ ಪೂಜೆ, ನವಗಂ, ಪಂಚಗವ್ಯA, ಕಲಶಭಿಷೇಕ, ದೇವಿಗೆ ಪೊಂಗಾಲ ೯.೩೦ ಗಂಟೆಯಿAದ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ತ್‌ಡಂಬ್ ನೃತ್ಯ, ಅನ್ನಸಂತರ್ಪಣೆ ನಡೆಯಲಿದೆ.

ಜ. ೬ ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾಪೂಜೆ, ನವಗಂ, ಪಂಚಗವ್ಯA, ಕಲಶಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫.೩೦ ಗಂಟೆಗೆ ಬಲಿಬಿಂಬದ ಮೆರವಣಿಗೆ, ದೀಪಾರಾಧನೆ, ಅತ್ತಾಯಪೂಜಾ ತ್ರಿಕೊಡಿಎರಕಂ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ದುರ್ಗಾ ಭಗವತಿ ದೇವಾಲಯದ ಪ್ರಮುಖ ರಸೀತಾ ತಿಳಿಸಿದ್ದಾರೆ.