ಗೋಣಿಕೊಪ್ಪಲು. ಡಿ.೩೦: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಗೋಣಿಕೊಪ್ಪ ಸಮೀಪದ ಚೆನ್ನಂಗೊಲ್ಲಿ ಬಳಿ ನಡೆದಿದೆ.

ಚೆನ್ನಂಗೊಲ್ಲಿ ನಿವಾಸಿ ಪವನ್ ಕುಮಾರ್ (೨೩) ಎಂದು ಮೃತ ದುರ್ದೈವಿ. ಚೆನ್ನಂಗೊಲ್ಲಿ ಬಳಿ ಇರುವ ಸೇತುವೆಗೆ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರ ಮೃತಪಟ್ಟಿದ್ದಾನೆ.

ಪವನ್ ಕುಮಾರ್ ತನ್ನ ಮನೆ ಚೆನ್ನಂಗೊಲ್ಲಿಗೆ ಸ್ನೇಹಿತನೊಂದಿಗೆ ತೆರಳುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಹಿಂಬದಿ ಸವಾರ ಗೋಣಿಕೊಪ್ಪಲುವಿನ ದಿಲನ್ ಸಣ್ಣ-ಪುಟ್ಟ ಗಾಯಗೊಂಡು ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.