ಮಡಿಕೇರಿ, ಡಿ. ೨೯: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲುಗುಂದ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿ ಸಂಘ, ಭಗವತಿ ಯೂತ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಭಗವತಿ ಫುಟ್ಬಾಲ್ ಕಪ್ ಪಂದ್ಯಾವಳಿಯಲ್ಲಿ ವೈಷ್ಣವಿ ಯುವಕ ಸಂಘ ಮರಗೋಡು, ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ, ಚಾಮುಂಡಿ ಯುನೈಟೆಡ್ ಒಂಟಿಯAಗಡಿ ಹಾಗೂ ಅಯ್ಯಪ್ಪ ಫ್ರೆಂಡ್ಸ್ ಹಾಲುಗುಂದ ಸೇರಿ ನಾಲ್ಕು ತಂಡಗಳು ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ.

ಮೊದಲನೇ ಕ್ವಾರ್ಟರ್ ಫೈನಲ್ ಪಂದ್ಯವು ಚಾಮುಂಡಿ ಯುನೈಟೆಡ್ ಒಂಟಿಯAಗಡಿ ಹಾಗೂ ಭಗವತಿ ಯೂತ್ ಕ್ಲಬ್ ಬಿ ಹಾಲುಗುಂದ ತಂಡಗಳ ನಡುವೆ ನಡೆಯಿತು. ಎರಡು ತಂಡಗಳು ನಿಗದಿತ ಸಮಯದಲ್ಲಿ ಯಾವುದೇ ಗೋಲುಗಳಿಸದೆ, ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ ಸಡನ್ ಡೆತ್‌ನಲ್ಲಿ ಚಾಮುಂಡಿ ಯುನೈಟೆಡ್ ತಂಡವು ೮-೭ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.

ಎರಡನೇ ಕ್ವಾಟರ್ ಫೈನಲ್ ಪಂದ್ಯವು ವೈಷ್ಣವಿ ಯುವಕ ಸಂಘ ಮರಗೋಡು ಹಾಗೂ ಮಿಲನ್ಸ್ ಫುಟ್ಬಾಲ್ ಕ್ಲಬ್ ಅಮ್ಮತ್ತಿ ತಂಡಗಳ ನಡುವೆ ನಡೆಯಿತು. ವೈಷ್ಣವಿ ಮರಗೋಡು ತಂಡವು ೪-೦ ಗೋಲುಗಳ ಅಂತರದಿAದ ಗೆದ್ದು ಸೆಮಿಫೈನಲ್ ಪ್ರವೇಶಿಸಿತು.

ಮೂರನೇ ಕ್ವಾರ್ಟರ್ ಫೈನಲ್ ಪಂದ್ಯವು ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ಹಾಗೂ ಭಗವತಿ ಯೂತ್ ಕ್ಲಬ್ ಎ ತಂಡಗಳ ನಡುವೆ ನಡೆಯಿತು. ಕ್ಯಾಪ್ಟನ್ಸ್ ೧೧ ತಂಡವು ೪-೦ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು.

ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯವು ಗಾಂಧಿ ಯೂತ್ ಕ್ಲಬ್ ಕಂಡಕರೆ ಹಾಗೂ ಅಯ್ಯಪ್ಪ ಫ್ರೆಂಡ್ಸ್ ಹಾಲುಗುಂದ ತಂಡಗಳ ನಡುವೆ ನಡೆಯಿತು.

ಎರಡನೇ ತಂಡಗಳು ೧-೧ ಗೋಲುಗಳನ್ನು ಗಳಿಸಿ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ ೫-೩ ಗೋಲುಗಳ ಅಂತರದಿAದ ಅಯ್ಯಪ್ಪ ಫ್ರೆಂಡ್ಸ್ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.