ಮಡಿಕೇರಿ, ಡಿ. ೨೮: ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ಸಂಘಟನೆ ವತಿಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತಾ.೨೯ ರಂದು (ಇಂದು) ಹಾಗೂ ನಾಳೆ ವಿಶ್ವ ಕೊಡವ ಸಮ್ಮೇಳನ (ಗ್ಲೋಬಲ್ ಕೊಡವ ಸಮ್ಮಿಟ್) ಕಾರ್ಯಕ್ರಮ ಸಂಭ್ರಮದಿAದ ಜರುಗಲಿದೆ.
ತಾ.೨೯ರ ಬೆ. ೯.೧೫ ರಿಂದ ನಗರದ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ಫೀ.ಮಾ. ಕಾರ್ಯಪ್ಪ ಮೈದಾನದಲ್ಲಿ ಎರಡು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ. ಜಿಲ್ಲೆ-ಜನಾಂಗದ ಹಿತದೃಷ್ಟಿಯ ಹಲವು ವಿಚಾರಗೋಷ್ಠಿಗಳು, ಸನ್ಮಾನ, ಸಾಂಸ್ಕೃತಿಕ ಪೈಪೋಟಿ, ಸಾಂಸ್ಕೃತಿಕ ಪ್ರದರ್ಶನ ಮತ್ತಿತರ ಕಾರ್ಯ ಕ್ರಮಗಳು ನಿಗದಿಯಾಗಿದ್ದು, ಹಲವಾರು ಪ್ರಮುಖರುಗಳು ಪಾಲ್ಗೊಳ್ಳುತ್ತಿದ್ದಾರೆ. ಇದೇ ಪ್ರಥಮ ಬಾರಿಗೆ ವಿಶ್ವ ಕೊಡವ ಸಮ್ಮೇಳನದಂತಹ ಸಾಹಸಕ್ಕೆ ಸಂಘಟನೆ ಪ್ರಯತ್ನ ನಡೆಸಿದ್ದು, ವಿವಿಧೆಡೆಗಳಿಂದ
(ಮೊದಲ ಪುಟದಿಂದ) ಜನಾಂಗದವರು ಭಾಗವಹಿಸುತ್ತಿದ್ದಾರೆ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದ್ದು, ಆಕರ್ಷಕ ವೇದಿಕೆ, ಐನ್ಮನೆಯ ಮಾದರಿ, ಮಂದ್ನ ಮಾದರಿ, ಮ್ಯೂಸಿಯಂನAತಹ ವಿಚಾರಗಳು ಆಕರ್ಷಿಸುತ್ತಿವೆ. ವಿವಿಧ ಕೊಡವ ಸಂಘ-ಸAಸ್ಥೆ-ಸಮಾಜಗಳು ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಸಾಂಸ್ಕೃತಿಕ ಸ್ಪರ್ಧೆಗೂ ಅಧಿಕ ತಂಡಗಳು ನೋಂದಾಯಿಸಿಕೊAಡಿವೆ.