ಕುಶಾಲನಗರ, ಡಿ. ೨೯: ಕಾಫಿ ತೋಟಗಳಲ್ಲಿ ಶುಂಠಿ ಬೆಳೆ ದಂಧೆ ಕಳೆದ ಕೆಲವು ಸಮಯದಿಂದ ಇಡೀ ಜಿಲ್ಲೆ ವ್ಯಾಪಿಸುತ್ತಿದ್ದು, ಜಿಲ್ಲೆಯ ಮರಗಳು ನಾಶವಾಗುವುದರೊಂದಿಗೆ ಸರ್ಕಾರದ ಸ್ವತ್ತು ಪರರ ಪಾಲಾಗುತ್ತಿರುವ ಪ್ರಕರಣಗಳು ಮತ್ತೆ ಮತ್ತೆ ಬೆಳಕಿಗೆ ಬರುತ್ತಿವೆ.

ಕುಶಾಲನಗರ ಸಮೀಪ ಕೊಡಗರಹಳ್ಳಿ ಬಳಿ ಖಾಸಗಿ ಎಸ್ಟೇಟ್ ಒಳಭಾಗದಲ್ಲಿ ಸುಮಾರು ೩೫ ಎಕರೆಗೂ ಮೀರಿ ವ್ಯಾಪ್ತಿಯ ಕಾಫಿ ತೋಟಗಳನ್ನು ನೆಲಸಮ ಮಾಡಿ ಆ ಪ್ರದೇಶದಲ್ಲಿರುವ ನೂರಾರು ಮರಗಳನ್ನು ನಾಶಪಡಿಸಿರುವ ವರದಿ ‘ಶಕ್ತಿ’ಯಲ್ಲಿ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಶನಿವಾರಸಂತೆ ಅರಣ್ಯ ವಲಯ ವ್ಯಾಪ್ತಿಯ ಶುಂಠಿ ಗ್ರಾಮದ ಬಸವನಕೊಪ್ಪ ಬಳಿ ಹತ್ತಕ್ಕೂ ಅಧಿಕ ಎಕರೆ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ನೂರಾರು ಮರಗಳ ಮಾರಣ ಹೋಮ ಮಾಡಿರುವುದು ಕಂಡು ಬಂದಿದೆ.

ಗ್ರಾಮದ ತೋಟಗಳಲ್ಲಿ ೨ ರಿಂದ ೩ ಎಕರೆಯಂತೆ ಹಲವು ತೋಟಗಳಲ್ಲಿ ಅಕ್ರಮವಾಗಿ ಮರ ಕಡಿದು ಹಾಕಿರುವ ಹಿನ್ನೆಲೆಯಲ್ಲಿ ಒಟ್ಟು ಐದು ಪ್ರಕರಣ ಗಳನ್ನು ಅರಣ್ಯ ಇಲಾಖೆ ಅಧಿಕಾರಿ ಗಳು ದಾಖಲು ಮಾಡಿದ್ದಾರೆ.

ಶುಂಠಿ ಬೆಳೆ ಬೆಳೆಯುವ ಹೆಸರಿನಲ್ಲಿ ಈ ರೀತಿ ಮರಗಳ ನಾಶವಾಗುತ್ತಿದ್ದು ಕಾಫಿ ತೋಟಗಳನ್ನು ಗುತ್ತಿಗೆ ಪಡೆದು ಅಕ್ರಮವಾಗಿ ಮರ ಕಡಿದು ಸಾಗಾಟ ಮಾಡುತ್ತಿರುವ ದಂಧೆಗಳು ಏರತೊಡಗಿವೆ. ಈ ಹಿನ್ನೆಲೆಯಲ್ಲಿ

(ಮೊದಲ ಪುಟದಿಂದ) ಶನಿವಾರಸಂತೆ ವಲಯ ಅರಣ್ಯ ಅಧಿಕಾರಿ ಗಾನಶ್ರೀ ಅವರು ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ಐದು ಮೊಕದ್ದಮೆ ದಾಖಲಿಸಿದ್ದಾರೆ.

ಇಲಾಖೆ ಅನುಮತಿ ಪಡೆಯದೆ ಅಕ್ರಮವಾಗಿ ಮರ ಕಡಿದಿರುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು, ಕಡಿದು ಹಾಕಿರುವ ಮರಗಳನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆದಿದ್ದು ಬಹಿರಂಗ ಹರಾಜು ಮಾಡಲಾಗು ವುದು ಎಂದು ಅರಣ್ಯ ಅಧಿಕಾರಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲೆಡೆ ಅಕ್ರಮವಾಗಿ ರಾಜಾರೋಷವಾಗಿ ಶುಂಠಿ ಹೆಸರಿನಲ್ಲಿ ಪ್ರಕೃತಿಯ ನಾಶವಾಗುತ್ತಿದ್ದು ಹೆಬ್ಬಾಲೆಯಿಂದ ಭೈರಪ್ಪನ ಗುಡಿ ಕಡೆಗೆ ತೆರಳುವ ಮಾರ್ಗದಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಶ್ರೀಗಂಧದ ಮರಗಳನ್ನು ತೆರವುಗೊಳಿಸಿ ಬೆಟ್ಟವನ್ನು ನೆಲಸಮ ಮಾಡುತ್ತಿರುವ ದೃಶ್ಯ ಕೂಡ ಗೋಚರಿಸಿದೆ.

ನೂರಾರು ಶ್ರೀಗಂಧ ಮರಗಳನ್ನು ಕೆಡವಿ ಭೈರಪ್ಪನ ಗುಡಿ ಅರಣ್ಯ ಭಾಗದಲ್ಲಿ ಒತ್ತುವರಿ ಮಾಡಿಕೊಂಡು ಕೆಲವರು ಅಕ್ರಮವಾಗಿ ಮನೆ ನಿರ್ಮಿಸಲು ಪ್ರಯತ್ನ ನಡೆಸುತ್ತಿದ್ದರೆ ಇನ್ನೊಂದಡೆ ಕೆಲವರು ಅರಣ್ಯ ಪ್ರದೇಶದ ಒತ್ತುವರಿ ಮಾಡಿ ಶುಂಠಿ ವಾಣಿಜ್ಯ ಬೆಳೆಗಳನ್ನು ಬೆಳೆಸುತ್ತಿರುವ ಪ್ರಕರಣಗಳು ಕಂಡುಬAದಿವೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ ಎ ಗೋಪಾಲ್ ಈ ಜಾಗದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅರಣ್ಯದ ಅಂಚಿನಲ್ಲಿ ಕೆಲವರಿಗೆ ಜಾಗದ ದಾಖಲು ಮಾಡಿಕೊಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದು, ಶ್ರೀಗಂಧ ಮರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ Åದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.

-ಚಂದ್ರಮೋಹನ್