ಸಿದ್ದಾಪುರ, ಡಿ. ೨೮: ಕರಡಿಗೋಡು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟದೊಳಗೆ ಬೀಡುಬಿಟ್ಟು ಕಾಫಿಗಿಡಗಳನ್ನು ಧ್ವಂಸಗೊಳಿಸಿದೆ. ಕರಡಿಗೋಡು ಗ್ರಾಮದ ಕೆ.ಪಿ. ದೇವಯ್ಯ ಹಾಗೂ ಗಣಪತಿ ಅವರ ಕಾಫಿ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿ ಫಸಲಿರುವ ಹಣ್ಣಾಗಿದ ಕಾಫಿಗಿಡಗಳನ್ನು ತುಳಿದು ತಿಂದು ನಾಶಗೊಳಿಸಿವೆ. ಇದರಿಂದಾಗಿ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇದಲ್ಲದೆ ಕೋತಿ, ಕಾಡುಕೋಣಗಳ ಹಾವಳಿಯಿಂದಾಗಿ ಬೆಳೆಗಾರರಿಗೆ ನೆಮ್ಮದಿ ಇಲ್ಲದಂತಾಗಿದೆ.