ಮಡಿಕೇರಿ, ಡಿ. ೨೭: ಕ್ರೀಡೆ ಯಿಂದ ಸೌಹಾರ್ದತೆ ಬೆಳೆದು ದ್ವೇಷ ದೂರವಾಗಲಿ ಎಂದು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಎಸ್.ಐ ರಾಘವೇಂದ್ರ ಪಿ.ಜಿ. ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲುಗುಂದ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿ ಸಂಘ, ಭಗವತಿ ಯೂತ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಗವತಿ ಫುಟ್ಬಾಲ್ ಕಪ್ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕ್ರೀಡೆಯಲ್ಲಿ ಯಾರೂ ಕೂಡ ದ್ವೇಷ ಬೆಳೆಸಬಾರದು. ಸೌಹಾರ್ದತೆ ಯಿಂದ ಭಾಗವಹಿಸಬೇಕು ಎಂದರು.
ಉದ್ಘಾಟನಾ ಸಮಾರಂಭದ ಅಧ್ಯ ಕ್ಷತೆಯನ್ನು ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಮೇಕೇರಿರ ವಿಜಯ್ ಪೂಣಚ್ಚ ವಹಿಸಿ ದ್ದರು. ಈ ಸಂದರ್ಭ ವೇದಿಕೆಯಲ್ಲಿ ಹಾಲುಗುಂದ ಗ್ರಾಮ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಉಜ್ಮಾ ಜಬೀನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆಮೀನಾ ಎಂ.ಎಸ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೀತಮ್ಮ ವೈ.ಬಿ, ಚೆಲ್ಲಿಯಂಡ ತಾಯಮ್ಮ, ಊರು ತಕ್ಕರಾದ ಎಂ.ಎA ನಾಣಯ್ಯ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಇದ್ದರು.
ಹಾಲುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಂದಿಕAಡ ದಿನೇಶ್ ಸ್ವಾಗತಿಸಿ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಎ ನಾಗೇಶ್ (ಈಶ್ವರ್) ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನೆ ಪಂದ್ಯವು ವೈಷ್ಣವಿ ಯುವಕ ಸಂಘ ಮರಗೋಡು ಎ ಹಾಗೂ ಚೌಡೇಶ್ವರಿ ಅಮ್ಮತ್ತಿ ತಂಡಗಳ ನಡುವೆ ನಡೆದು ೩-೨ ಗೋಲುಗಳ ಅಂತರದಿAದ ವೈಷ್ಣವಿ ತಂಡ ಗೆಲುವು ಸಾಧಿಸಿತು.
ಎರಡನೇ ಪಂದ್ಯವು ಚಾಮುಂಡಿ ಎಫ್.ಸಿ ಒಂಟಿಯAಗಡಿ ಹಾಗೂ ಸ್ಕಿಪ್ಪರ್ಸ್ ಎಫ್.ಸಿ ಪೊನ್ನಂಪೇಟೆ ತಂಡಗಳ ನಡುವೆ ನಡೆದು ಒಂಟಿಯAಗಡಿ ತಂಡವು ೫-೧ ಗೋಲುಗಳ ಅಂತರದಿAದ ಗೆಲುವು ಪಡೆಯಿತು. ಮೂರನೇ ಪಂದ್ಯವು ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ಹಾಗೂ ಆಕ್ಸ್ಫರ್ಡ್ ಎಫ್.ಸಿ ವೀರಾಜಪೇಟೆ ತಂಡಗಳ ನಡುವೆ ನಡೆದು ೫-೦ ಗೋಲುಗಳ ಅಂತರದಿAದ ಕ್ಯಾಪ್ಟನ್ಸ್ ೧೧ ತಂಡ ಗೆಲುವು ಸಾಧಿಸಿತು.