ಸೋಮವಾರಪೇಟೆ, ಡಿ. ೨೭: ಕಳೆದ ೧೯೪೦ರಲ್ಲಿ ನಿರ್ಮಾಣಗೊಂಡು ನಿರ್ವಹಣೆಯ ಕೊರತೆಯಿಂದಾಗಿ ೪ ತಿಂಗಳ ಹಿಂದೆ ಶಿಥಿಲಾವಸ್ಥೆಗೆ ತಲುಪಿದ್ದ ಕಕ್ಕೆಹೊಳೆ ಜಂಕ್ಷನ್ ಸೇತುವೆಯನ್ನು ರೂ. ೧.೨೪ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಶಾಸಕ ಮಂಥರ್ ಗೌಡ ಅವರು ಚಾಲನೆ ನೀಡಿದ್ದು, ಸೇತುವೆ ನಿರ್ಮಾಣ ಕಾಮಗಾರಿಗೆ ಸಂಬAಧಿಸಿದAತೆ ‘ಗುಣಮಟ್ಟದಲ್ಲಿ ರಾಜಿ ಇಲ್ಲ-ಕಳಪೆ ಕಾಮಗಾರಿಗೆ ಇಂಜಿನಿಯರ್‌ಗಳು ಅವಕಾಶ ನೀಡಬಾರದು’ ಎಂದು ಸೂಚಿಸಿದರು.

ಕಳೆದ ೪ ತಿಂಗಳ ಹಿಂದೆ ಸೇತುವೆಯ ಒಂದು ಪಾರ್ಶ್ವ ಕುಸಿತಗೊಂಡಿದ್ದು, ಬದಲಿ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಸೇತುವೆಯ ಮೇಲಿನ ಓಡಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದ ಲೋಕೋಪಯೋಗಿ ಇಲಾಖೆ, ನೂತನ ಸೇತುವೆ ನಿರ್ಮಾಣಕ್ಕೆ ರೂ. ೧.೬೫ ಕೋಟಿ ಯೋಜನಾ ವೆಚ್ಚಕ್ಕೆ ಕ್ರಿಯಾಯೋಜನೆ ತಯಾರಿಸಿ,ಸರ್ಕಾರಕ್ಕೆ ಸಲ್ಲಿಸಿತ್ತು.

ಈ ಸಂದರ್ಭ ಸ್ಥಳ ಪರಿಶೀಲನೆ ನಡೆಸಿದ್ದ ಶಾಸಕ ಮಂಥರ್ ಗೌಡ ಅವರು, ಕ್ರಿಯಾಯೋಜನೆ ಸಂಬAಧ ರಾಜ್ಯ ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಖುದ್ದು ಭೇಟಿ ಮಾಡಿ, ತುರ್ತಾಗಿ ಅನುದಾನ ಒದಗಿಸುವಂತೆ ಮನವಿ ಮಾಡಿದ್ದರು.

ಅದರಂತೆ ಸಚಿವರು ಸ್ಪಂದಿಸಿದು. ಇಲಾಖೆ ಮೂಲಕ ರೂ. ೧.೨೪ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲೇ ಲೋಕೋಪಯೋಗಿ ಇಲಾಖೆ ಮೂಲಕ ಪ್ರಥಮವಾಗಿ ಕಕ್ಕೆಹೊಳೆ ಸೇತುವೆ ಕಾಮಗಾರಿಗೆ ಹಣ ಬಿಡುಗಡೆ ಮಾಡಿದೆ. ಲೋಕೋಪಯೋಗಿ ಇಲಾಖೆಯ ಮೂಲಕ ರಾಜ್ಯದಲ್ಲೇ ಪ್ರಥಮ ಕಾಮಗಾರಿ ಎಂಬ ಕೀರ್ತಿಗೂ ಪಾತ್ರವಾಗಿದ್ದು, ಶಾಸಕ ಮಂಥರ್ ಗೌಡ ಅವರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಉದ್ದೇಶಿತ ಯೋಜನೆಯಡಿ ೮ ಮೀಟರ್ ಅಗಲ, ೭.೬೦ ಮೀಟರ್ ಎತ್ತರ, ೩೦ ಮೀಟರ್ ತಡೆಗೋಡೆ ನಿರ್ಮಾಣವಾಗಲಿದ್ದು, ಮುಂದಿನ ನಾಲ್ಕು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಶಾಸಕರು ಸಂಬAಧಿಸಿದ ಗುತ್ತಿಗೆದಾರ ಆರ್.ಸಿ. ಗಣೇಶ್, ಎಇಇ ವೆಂಕಟೇಶ್ ನಾಯಕ್ ಅವರುಗಳಿಗೆ ಸೂಚಿಸಿದ್ದಾರೆ.

ನೂತನ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ರಾಜ್ಯದಲ್ಲಿಯೇ ಲೋಕೋಪಯೋಗಿ ಇಲಾಖೆ ಮೂಲಕ ಪ್ರಥಮವಾಗಿ ನಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಯನ್ನು ಗುಣಮಟ್ಟದಲ್ಲಿ ಕೈಗೊಳ್ಳಬೇಕು. ಕಳಪೆಗೆ ಅವಕಾಶ ನೀಡಬಾರದು. ಪ್ರಥಮ ಅನುದಾನದ ಕಾಮಗಾರಿ ಶಾಶ್ವತವಾಗಿ ಉಳಿಯುವಂತೆ ಆಗಬೇಕು ಎಂದರು.

ಸೇತುವೆಯ ಕೆಳ ಭಾಗದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಹಾರಂಗಿ ಮತ್ತು ದುದ್ದುಗಲ್ಲಿನಿಂದ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಇದರ ಪೈಪ್‌ಲೈನ್‌ಗಳನ್ನು ಬದಲಿಸಿ, ನಂತರ ಕಾಮಗಾರಿ ಆರಂಭಿಸಬೇಕು. ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.

ಮುಂದಿನ ದಿನಗಳಲ್ಲಿ ಕುಶಾಲನಗರದಲ್ಲಿ ಡಿಪೋ, ಕಬ್ಬಿಣ ಸೇತುವೆ ನಿರ್ಮಾಣ, ಹಾರಂಗಿ ಸೇತುವೆ, ಕುಶಾಲನಗರ ನ್ಯಾಯಾಲಯ ಸಂಕೀರ್ಣ ಸೇರಿದಂತೆ ಇನ್ನಿತರ ಯೋಜನೆಗಳು ಜಾರಿಗೊಳ್ಳಲಿವೆ. ಹಾರಂಗಿ ಎಡದಂಡೆ ನಾಲೆ ಕಾಮಗಾರಿಗೆ ೭೮ ಕೋಟಿ ಅನುದಾನ ಬಿಡುಗಡೆಯಾಗಿದೆ. ಕೇವಲ ೬ ತಿಂಗಳಿನಲ್ಲಿಯೇ ಸರ್ಕಾರ ಅಭಿವೃದ್ಧಿ ಕಾಮಗಾರಿಗೆ ವೇಗ ನೀಡಿ ಅನುದಾನ ಬಿಡುಗಡೆಗೊಳಿಸುತ್ತಿದೆ ಎಂದರು.

ಈ ಸಂದರ್ಭ ಸಹಾಯಕ ಅಭಿಯಂತರ ಅರ್ಬಾಜ್ ಅಹಮ್ಮದ್, ಅಭಿಯಂತರ ವಿಜಯಕುಮಾರ್, ಚೌಡ್ಲು ಗ್ರಾ.ಪಂ. ಸದಸ್ಯ ಚೇತನ್, ಪ.ಪಂ. ಸದಸ್ಯೆ ಶೀಲಾ ಡಿಸೋಜ, ಪಕ್ಷದ ಬ್ಲಾಕ್ ಅಧ್ಯಕ್ಷ ಬಿ.ಬಿ. ಸತೀಶ್, ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಜಿ.ಪಂ. ಮಾಜೀ ಸದಸ್ಯೆ ಕೆ.ಪಿ. ಚಂದ್ರಕಲಾ, ಮುಖಂಡರಾದ ಎಸ್.ಎಂ. ಚಂಗಪ್ಪ, ಚೇತನ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್, ಸುಜಿತ್, ಅಬ್ದುಲ್ ರಜಾಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.