ಸೋಮವಾರಪೇಟೆ, ಡಿ. ೨೮: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಳಿಗೆಗಳ ಟೆಂಡರ್ ಗೊಂದಲಕ್ಕೆ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳೇ ನೇರ ಕಾರಣ ಎಂದು ಸದಸ್ಯರುಗಳು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಪಂಚಾಯಿತಿ ಸದಸ್ಯ ಬಿ. ಸಂಜೀವ, ೧೩.೧೦.೨೦೨೩ರ ಸಭೆಯಲ್ಲಿ ಟೆಂಡರ್ ವಿಚಾರ ಚರ್ಚೆಗೆ ಬಂದು ಈಗಾಗಲೇ ಇರುವವರಿಗೆ ನೀಡಬಹುದೇ ಎಂಬ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟನೆ ಕೋರಲು ಶಾಸಕ ಮಂಥರ್ ಗೌಡ ಅವರ ಸಮ್ಮುಖದಲ್ಲಿ ತೀರ್ಮಾ ನಿಸಲಾಗಿತ್ತು. ನಂತರ ೧೭ಕ್ಕೆ ಸಭೆ ಕರೆದ ಮುಖ್ಯಾಧಿಕಾರಿಗಳು ಕೊನೆಕ್ಷಣದಲ್ಲಿ ರದ್ದುಗೊಳಿಸಿದರು. ತದನಂತರ ೨೧ಕ್ಕೆ ಮತ್ತೆ ಕರೆದ ಸಭೆಯಲ್ಲಿ ತಹಶೀಲ್ದಾರ್ ಗೈರು ಹಿನ್ನೆಲೆ ಮುಂದೂಡಲಾಯಿತು. ಅದಾದ ನಂತರ ಯಾರ ಗಮನಕ್ಕೂ ತಾರದೇ ಅಧಿಕಾರಿಗಳೇ ನೇರಗೆ ದಿನಾಂಕ ನಿಗದಿಗೊಳಿಸುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಅಂಗಡಿ ಮಳಿಗೆಗಳ ಡೆಪಾಸಿಟ್, ಬಾಡಿಗೆ ನಿಗದಿ, ಎಸ್.ಸಿ. ಎಸ್.ಟಿ. ಮೀಸಲಾತಿ ಸರಿಯಾಗಿ ಮಾಡಿಲ್ಲ. ಅಂಗಡಿಗಳ ದುರಸ್ತಿ ಮಾಡದೇ ಹರಾಜಿಗೆ ಮುಂದಾಗಿದ್ದಾರೆ. ಎಸ್.ಸಿ. ಎಸ್.ಟಿ.ಗಳಿಗೆ ಕ್ಲಬ್ ರಸ್ತೆಯ ೨೦ ಅಂಗಡಿಗಳ ಪೈಕಿ ೪ ನೀಡಬೇಕಿದ್ದರೂ ಕೇವಲ ೧ ಅಂಗಡಿ ನಿಗದಿಗೊಳಿ ಸಲಾಗಿದೆ. ಸಿ.ಕೆ. ಸುಬ್ಬಯ್ಯ ರಸ್ತೆಯ ಮಳಿಗೆಗಳು ಶಿಥಿಲಾವಸ್ಥೆಗೆ ತಲುಪಿವೆ. ಇವುಗಳನ್ನು ಸರಿಪಡಿಸಿ ನಂತರ ಟೆಂಡರ್ ಕರೆಯಿರಿ ಎಂದು ತಿಳಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಇದರಿಂದಾಗಿ ಪಟ್ಟಣ ಪಂಚಾ ಯಿತಿ ಸದಸ್ಯರ ಮೇಲೆ ಸಾರ್ವ ಜನಿಕರು ಸಂಶಯ ಪಡು ವಂತಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ ಮೇರೆ, ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ತಿಳಿಸಿದ್ದರು. ಮೊನ್ನೆ ನಡೆದ ಸಭೆಯಲ್ಲಿಯೂ ಅಧಿಕಾರಿಗಳು, ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಿಲ್ಲ ಎಂದರು.
ಈಗಿರುವ ವರ್ತಕರಿಗೆ ಮಳಿಗೆ ನೀಡಬಹುದೇ ಎಂಬ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟನೆ ಕೋರುವಂತೆ ಹೇಳಿದ್ದರೂ ಆಡಳಿತಾ ಧಿಕಾರಿಗಳು, ಮುಖ್ಯಾಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಎಂದು ದೂರಿದ ಅವರು, ಪ.ಪಂ.ನಲ್ಲಿ ೧.೫೦ ಕೋಟಿ ಅನುದಾನ ಇದ್ದು, ಮೊದಲು ಮಳಿಗೆಗಳನ್ನು ದುರಸ್ತಿಗೊಳಿಸಿ, ಮೀಸಲಾತಿ ಸರಿಪಡಿಸಿ ನಂತರ ಟೆಂಡರ್ ನಡೆಸಲಿ ಎಂದು ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಖಾಯಿಯಾಗಿ ೬ ತಿಂಗಳು ಕಳೆದಿವೆ. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಿಲ್ಲ. ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಿದ್ದು, ಪಟ್ಟಣದ ಮಧ್ಯಭಾಗದಲ್ಲೇ ಕಸವನ್ನು ಬೆಂಕಿ ಹಾಕಿ ಸುಡಲಾಗುತ್ತಿದೆ. ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಶುಚಿತ್ವವೂ ಇಲ್ಲವಾಗಿದೆ. ಇವುಗಳ ಬಗ್ಗೆ ಗಮನಿಸದ ಅಧಿಕಾರಿಗಳು ಟೆಂಡರ್ ಗೆ ಮಾತ್ರ ಪಟ್ಟು ಹಿಡಿದು ಕುಳಿತಿರುವುದು ಯಾಕೆಂದು ತಿಳಿಯುತ್ತಿಲ್ಲ ಎಂದು ಸಂಶಯ ವ್ಯಕ್ತಪಡಿಸಿದರು.
ದಿಢೀರ್ ಟೆಂಡರ್ನಿAದಾಗಿ ೬೦ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಸರ್ಕಾರ ಮತ್ತು ಜನರಿಗೆ ಅನ್ಯಾಯ ಆಗಬಾರದು; ಪ.ಪಂ.ಗೂ ನಷ್ಟ ಆಗಬಾರದು ಎಂಬ ಚಿಂತನೆ ಯೊಂದಿಗೆ ಈಗಿರುವ ವರ್ತಕರಿಗೆ ಬಾಡಿಗೆ ಮತ್ತು ಮುಂಗಡ ಹಣ ಹೆಚ್ಚು ಮಾಡಿ ನೀಡಬೇಕು ಎಂದು ಸಂಜೀವ ಒತ್ತಾಯಿಸಿದರು.
ಕೋವಿಡ್ ಸಂದರ್ಭವೂ ಬಾಡಿಗೆ ಕಟ್ಟಿಕೊಂಡು ಬಂದಿದ್ದೇವೆ. ಮುಂದುವರೆಸಿದರೆ ಜೀವನ ನಡೆಸಬಹುದಾಗಿದೆ ;ಇಲ್ಲವಾದರೆ ಬದುಕು ಕಷ್ಟವಾಗಲಿದೆ ಎಂದು ವರ್ತಕರು ಮನವಿ ಮಾಡಿದ್ದಾರೆ. ಅವರಿಗೆ ಕೊಡಬಹುದೇ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಿಲ್ಲ. ಸಭೆಗಳನ್ನು ಕರೆದು ತೀರ್ಮಾನಿಸಿಲ್ಲ. ಟೆಂಡರ್ ಜನವರಿ ೪ ಕ್ಕೆ ನಿಗದಿ ಮಾಡಿರುವುದು ಸರಿಯಲ್ಲ. ಟೆಂಡರ್ ಮುಂದೂಡಿ ವರ್ತಕರಿಗೆ ಕಾಲಾವಕಾಶ ನೀಡ ಬೇಕು. ಈ ಬಗ್ಗೆ ಡಿ.ಸಿ. ಹಾಗೂ ಸರ್ಕಾರ,ಶಾಸಕರೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸಬೇಕು ಎಂದರು.
ಸದಸ್ಯರುಗಳಿಗೆ ಟೆಂಡರ್ ಮಾಡಲು ವಿರೋಧವಿಲ್ಲ. ಆದರೆ ಲೋಪದೋಷ ಸರಿಪಡಿಸಬೇಕು. ಈಗಾಗಲೇ ಅಂಗಡಿ ಇರುವವರು ಮತ್ತೆ ಟೆಂಡರ್ ಹಾಕಿದ್ದಾರೆ. ಒಂದೇ ಮನೆಯಲ್ಲಿ ೧೦ ಜನ ಟೆಂಡರ್ ನಲ್ಲಿದ್ದಾರೆ. ಈಗಾಗಲೇ ಟೆಂಡರ್ನಲ್ಲಿ ಮಳಿಗೆ ಪಡೆದು ಬಾಡಿಗೆ ಪಾವತಿಸದೇ ಇರುವವರೂ ಅರ್ಜಿ ಹಾಕಿದ್ದಾರೆ. ಅವರುಗಳನ್ನು ಟೆಂಡರ್ ನಿಂದ ಹೊರಗಿಡಬೇಕೆಂದು ಸದಸ್ಯ ಶುಭಕರ್ ಆಗ್ರಹಿಸಿದರು.
ಈಗಾಗಲೇ ಕೆಲವರು ಅಂಗಡಿಗಳಿಗೆ ತೆರಳಿ ವಸೂಲಾತಿಗೆ ಇಳಿದಿದ್ದಾರೆ. ೫೦ ರಿಂದ ೨ ಲಕ್ಷ ಕೇಳುತ್ತಿದ್ದಾರೆ. ನಿಮಗೆ ಅಂಗಡಿ ಮಾಡಿಸಿ ಕೊಡುತ್ತೇವ ಎಂದು ಡೀಲ್ ಕುದುರಿಸುತ್ತಿದ್ದಾರೆ. ಈ ಬಗ್ಗೆಯೂ ಜಿಲ್ಲಾಧಿಕಾರಿಗಳು, ಶಾಸಕರು ಗಮನ ಹರಿಸಬೇಕು ಎಂದರು.
ಈ ಹಿಂದೆಯೂ ಎಸ್.ಸಿ. ಎಸ್.ಟಿ. ವರ್ಗಕ್ಕೆ ಮೀಸಲಾತಿ ನೀಡಿದೆ. ಪುಷ್ಪಗಿರಿ ಹಾಗೂ ಕಾವೇರಿ ಸಂಕೀರ್ಣದಲ್ಲಿ ಮಳಿಗೆ ಮೀಸಲಿರಿ ಸಲಾಗಿದೆ. ಆದರೂ ಕೆಲವರು ಪಂಚಾ ಯಿತಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಲೋಪ ದೋಷಗಳನ್ನು ಸರಿಪಡಿಸಿ ಟೆಂಡರ್ ಕರೆಯಲು ಮುಂದಾಗಬೇಕು ಎಂದು ಶೀಲಾಡಿಸೋಜ ಹೇಳಿದರು.
ಇದೀಗ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೂಲೆಯಲ್ಲಿರುವ ಮಳಿಗೆ, ದುರಸ್ತಿಗೀಡಾಗಿರುವ ಅಂಗಡಿಗಳನ್ನು ನೀಡಿದ್ದಾರೆ. ಇಲ್ಲೂ ತಾರತಮ್ಯ ಆಗಿದೆ. ಜನರು ಓಡಾಡುವ ಪ್ರದೇಶದ ಅಂಗಡಿಗಳನ್ನು ಮೀಸಲಾತಿಗೆ ಒಳಪಡಿಸಿಲ್ಲ. ಜನ ಸಂಚಾರವಿಲ್ಲದ, ವ್ಯಾಪಾರ ವಹಿವಾಟು ನಡೆಯದ ಅಂಗಡಿಗ ಳನ್ನು ನೀಡಲಾಗಿದೆ. ಇದನ್ನು ಸರಿಪಡಿಸಬೇಕೆಂದು ಸದಸ್ಯೆ ಮೋಹಿನಿ ಒತ್ತಾಯಿಸಿದರು. ಗೋಷ್ಠಿಯಲ್ಲಿ ಸದಸ್ಯ ಪಿ.ಕೆ. ಚಂದ್ರು, ನಾಗರತ್ನ ಉಪಸ್ಥಿತರಿದ್ದರು.