ನರ್ವಾಡೆ ವಿನಾಯಕ್ ಕರ್ಬಾರಿ ನೂತನ ಎಸಿ

ಮಡಿಕೇರಿ, ಡಿ. ೨೭: ಕೊಡಗು ಜಿಲ್ಲಾ ಉಪವಿಭಾಗಾ ಧಿಕಾರಿಯಾಗಿದ್ದ ಡಾ. ಯತೀಶ್ ಉಲ್ಲಾಳ್ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ (ಆಡಳಿತ) ವರ್ಗಾ ವಣೆಗೊಂಡಿದ್ದಾರೆ. ನೂತನ ಉಪ ವಿಭಾಗಾಧಿಕಾರಿ ಯಾಗಿ ೨೦೨೧ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ನರ್ವಾಡೆ ವಿನಾಯಕ್ ಕರ್ಬಾರಿ ಇಂದು ಅಧಿಕಾರ ವಹಿಸಿ ಕೊಂಡಿದ್ದಾರೆ.