*ಗೋಣಿಕೊಪ್ಪ, ಡಿ. ೨೬: ಸಂತ ಥೋಮಸ್ ಶಾಲೆಯ ವಾರ್ಷಿಕೋತ್ಸವ ಪ್ರಯುಕ್ತ ಕಳೆದ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಗೋಣಿಕೊಪ್ಪಲು ಸಂತ ಥೋಮಸ್ ಶಾಲಾ ವಿದ್ಯಾಸಂಸ್ಥೆಯ ಅಧ್ಯಕ್ಷ ಫಾದರ್ ಅಗಸ್ಟೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಬಾಲು, ಶಾಲೆಯ ವ್ಯವಸ್ಥಾಪಕ ಫಾದರ್ ಥೋಮಸ್, ಸಂತ ಥೋಮಸ್ ಶಾಲಾ ವಿದ್ಯಾಸಂಸ್ಥೆಯ ಪ್ರಿನ್ಸಿಪಾಲ್ ಫಾದರ್ ಅಂಥೋನಿ, ಆಡಳಿತಾಧಿಕಾರಿ, ಫಾದರ್ ನೊಬನ್, ಸಂತ ಥೋಮಸ್ ಚರ್ಚ್ನ ಧರ್ಮ ಗುರು ಫಾದರ್ ವರ್ಗೀಸ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಕೆ. ಪ್ರವೀಣ್, ಉಪಾಧ್ಯಕ್ಷ ಪ್ರಮೋದ್ ಗಣಪತಿ, ಸಂಘದ ಖಜಾಂಚಿ ಚಂದನ್ ಕಾಮತ್, ಸಂತ ಥೋಮಸ್ ಶಾಲಾ ವಿದ್ಯಾಸಂಸ್ಥೆಯ ಅಭಿವೃದ್ಧಿ ಸಮಿತಿ ಸದಸ್ಯ ವಿಲ್ಸನ್ ಸಿ.ಜೆ, ಎ.ಜೆ. ಬಾಬು, ಅಬ್ದುಲ್ ಸಮದ್, ಪ್ರಭಾವತಿ ಇದ್ದರು.