*ಗೋಣಿಕೊಪ್ಪ, ಡಿ. ೨೬: ರಾಷ್ಟçಮಟ್ಟದಲ್ಲಿ ನಡೆಯಲಿರುವ ಥ್ರೋಬಾಲ್ ಪಂದ್ಯಾವಳಿಗೆ ಜಿಲ್ಲೆಯ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಜಾರ್ಖಂಡ್ ರಾಜ್ಯದ ಚಾಂದಿಲ್ನಲ್ಲಿ ತಾ. ೨೭, ೨೮ ಮತ್ತು ೨೯ರಂದು ಪಂದ್ಯಾವಳಿ ನಡೆಯಲಿದೆ.
೪೬ನೇ ಸೀನಿಯರ್ಸ್ ಮತ್ತು ೩೧ನೇ ಜೂನಿಯರ್ಸ್ ರಾಷ್ಟಿçÃಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಕರ್ನಾಟಕ ಬಾಲಕ ಮತ್ತು ಬಾಲಕಿಯರ ತಂಡದಲ್ಲಿ ಕೊಡಗು ಜಿಲ್ಲೆಯಿಂದ ವೀರಾಜಪೇಟೆಯ ರೈಸಿಂಗ್ ಸ್ಟಾರ್ ಕೋಚಿಂಗ್ ಸೆಂಟರ್ನ ಸುರೇಶ್ ನೇತೃತ್ವದಲ್ಲಿ ೧೬ ಕ್ರೀಡಾಪಟುಗಳು ಆಯ್ಕೆಗೊಂಡಿದ್ದಾರೆ.
ಕರ್ನಾಟಕ ಮಹಿಳಾ ತಂಡದ ವ್ಯವಸ್ಥಾಪಕರಾಗಿ ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಅಲಿಮ ಪಿ.ಹೆಚ್. ಕೂಡ ಆಯ್ಕೆಗೊಂಡಿದ್ದಾರೆ.