ಕೂಡಿಗೆ, ಡಿ. ೨೬: ಕೊಡಗು ಜಿಲ್ಲಾ ಕುರುಬ ಸಂಘದ ಅಧ್ಯಕ್ಷರಾಗಿ ಹೆಚ್.ಹೆಚ್. ಕೃಷ್ಣ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಕುಮಾರ್, ಕುಶಾಲನಗರ ತಾಲೂಕು ಅಧ್ಯಕ್ಷರಾಗಿ ಪ್ರಸನ್ನ, ವೀರಾಜಪೇಟೆ ತಾಲೂಕು ಅಧ್ಯಕ್ಷರಾಗಿ ಸುಭಾಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಧರ್ಮ ಅವರನ್ನು ಸಂಘದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಜಿಲ್ಲಾ ಕುರಿ ಉಣ್ಣೆ ಉತ್ಪಾದಕರ ನಿಗಮದ ಜಿಲ್ಲಾಧ್ಯಕ್ಷ ಡಿ.ಆರ್. ಪ್ರಭಾಕರ್ ಮಾತನಾಡಿ, ಸಂಘಟನೆ ಮೂಲಕ ಸಂಘವನ್ನು ಸಮರ್ಥವಾಗಿ ಮುನ್ನಡೆಸಲು, ಸರಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಲು, ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವಂತಹ ಅಭ್ಯರ್ಥಿಗಳು ಸಂಘಕ್ಕೆ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಮಿತಿಯ ಸೂಚನೆ ಮೇರೆಗೆ ನೂತನ ಸಮಿತಿಗೆ ಪ್ರಮುಖರನ್ನು ಆಯ್ಕೆಗೊಳಿಸಲಾಗಿದೆ ಎಂದು ಹೇಳಿದರು.

ಸಂಘದ ಮುಖಂಡ ಸಿ.ಕೆ. ಉದಯಕುಮಾರ್ ಮಾತನಾಡಿದರು.

ಸಂಘದ ರಾಜ್ಯ ನಿರ್ದೇಶಕ ಹೇಮಲತಾ ಮಂಜುನಾಥ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ದಮಯಂತಿ, ಕೆ.ಕೆ. ದೊಡ್ಡಯ್ಯ, ಪುಟ್ಟಸ್ವಾಮಿ, ದೊಡ್ಡಯ್ಯ ಭುವನಗಿರಿ, ಮೋಹನ್ ರಾಜ್ ಭದ್ರಗೋಳ, ಬಿ.ಎಸ್. ಮಂಜುನಾಥ್, ಪುಟ್ಟಸ್ವಾಮಿ, ಗಿರೀಶ್, ರವಿ, ರಾಮೇಗೌಡ, ಹಿತ್ತಲಕೇರಿ ರಮೇಶ್, ಸ್ವಾಮಿ, ಚಂದ್ರ, ಜಗದೀಶ್, ಮತ್ತಿತರರು ಇದ್ದರು.