ಕಣಿವೆ, ಡಿ. ೨೬: ಚರಂಡಿಯಲ್ಲಿ ತ್ಯಾಜ್ಯ ತುಂಬಿ ತುಳುಕಿ ಗಬ್ಬು ನಾತ ಹೊಡೆಯುತ್ತಿದ್ದು ಸಾಂಕ್ರಾಮಿಕ ರೋಗಗಳ ಕೇಂದ್ರವಾಗಿ ಮಾರ್ಪಟ್ಟಿದ್ದು ಮನೆ ಮಂದಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ಸೇರಿದ ಪ್ರಸಂಗ ಕೂಡಿಗೆಯಲ್ಲಿ ಕಂಡು ಬಂದಿದೆ.

ಕೂಡಿಗೆ ಸರ್ಕಲ್ ನಲ್ಲಿ ವಾಸವಿರುವ ನಿವೃತ್ತ ಪೊಲೀಸ್ ಗೋಪಾಲ್ ಹಾಗೂ ಅವರ ಪತ್ನಿ ತಮ್ಮ ಮನೆಯ ಬಳಿ ಇರುವ ನೆರೆಮನೆಯ ಚರಂಡಿಯ ತ್ಯಾಜ್ಯದ ಬಗ್ಗೆ ಕೂಡಿಗೆ ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಕೂಡ ಸ್ವಚ್ಛತೆಗೆ ಸ್ಪಂದಿಸದ ಕಾರಣ ಸಾಂಕ್ರಾಮಿಕ ರೋಗ ಬಾಧೆಗೆ ಸಿಲುಕಿದ್ದಾರೆ ಎಂದು ಇದೇ ರಸ್ತೆ ಬದಿಯಲ್ಲಿ ಬೀಡಾ ಅಂಗಡಿ ಇಟ್ಟುಕೊಂಡಿರುವ ಮೀನಾಕ್ಷಿ ಎಂಬವರು ದೂರಿದ್ದಾರೆ. ಪಕ್ಕದ ಮನೆಯವರು ಚರಂಡಿಗೆ ಶೌಚದ ತ್ಯಾಜ್ಯವನ್ನು ಕೂಡ ಹರಿಸುತ್ತಿದ್ದಾರೆ. ಇದರಿಂದ ನಮಗೆ ಅನ್ನ ನೀರು ಸೇರದಂತಹ ದುಸ್ಥಿತಿಯಲ್ಲಿ ಸಿಲುಕಿದ್ದೇವೆ. ಈ ಬಗ್ಗೆ ಗ್ರಾಮ ಪಂಚಾಯಿತಿಯ ಪಿಡಿಓ ಅವರಿಗೆ ದೂರು ನೀಡಿದರೂ ಕೂಡ ಸ್ಪಂದಿಸುತ್ತಿಲ್ಲ ಎಂದು ಮೀನಾಕ್ಷಿ ದೂರಿದ್ದಾರೆ. ಕೂಡಲೇ ಸಂಬAಧಿ ಸಿದ ಆರೋಗ್ಯಾಧಿಕಾರಿಗಳು ಇಲ್ಲಿ ಬಂದು ಸ್ಥಳ ಪರಿಶೀಲಿಸಿ ಚರಂಡಿಯನ್ನು ಸ್ವಚ್ಛಗೊಳಿಸಿ ನ್ಯಾಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.