ಶನಿವಾರಸAತೆ, ಡಿ. ೨೬: ಪಟ್ಟಣದ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮ ಸೇವಾ ಸಮಿತಿ ವತಿಯಿಂದ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಶ್ರೀರಾಮ ಮಂದಿರದಲ್ಲಿ ಶ್ರೀರಾಮ, ಸೀತೆ, ಲಕ್ಷö್ಮಣ ಹಾಗೂ ಆಂಜನೇಯ ಸ್ವಾಮಿಗೆ ವಿವಿಧ ಬಗೆಯ ಹೂವು ಗಳಿಂದ ಅಲಂಕಾರ ಮಾಡಿ ಪೂಜಿಸಲಾಯಿತು. ಸಂಜೆ ೫ ರಿಂದ ೭ ಗಂಟೆಯವರೆಗೆ ಪ್ರಧಾನ ಅರ್ಚಕ ಪ್ರಸನ್ನ ರಾವ್ ಅವರ ನೇತೃತ್ವದಲ್ಲಿ ಅರ್ಚಕರಾದ ಪ್ರಭಾಕರ್ ಭಟ್, ಸುದರ್ಶನ್ ಭಟ್ ಹಾಗೂ ವೆಂಕಟೇಶ್ ಭಟ್ ಅವರುಗಳು ಗಣಪತಿ ಪೂಜೆ, ಪುಣ್ಯಾಹ, ಕಲಶಾರಾಧನೆ, ರಾಮ ತಾರಕ ಮತ್ತು ಆಂಜನೇಯ ಹೋಮ ನೆರವೇರಿಸಿದರು. ನಂತರ ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ಬಳಿಕ ತೀರ್ಥ-ಪ್ರಸಾದ ವಿನಿಯೋಗವಾಯಿತು. ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.