ಶಾಸಕ ಮಂಥರ್ ಗೌಡ
ಕೂಡಿಗೆ, ಡಿ. ೨೬: ರಾಜ್ಯದಲ್ಲೇ ಪ್ರಥಮವಾಗಿ ಆರಂಭಗೊAಡ ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯು ಇದುವರೆಗೂ ಸಾವಿರಾರು ಉತ್ತಮ ಕ್ರೀಡಾ ಪಟುಗಳನ್ನು ನೀಡುವ ಮೂಲಕ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಗುರುತಿಸಿಗೊಂಡಿದೆ. ಕ್ರೀಡಾ ಶಾಲೆ ಅಭಿವೃದ್ಧಿಗೆ ಪೂರಕವಾದ ವಿವಿಧ ಯೋಜನೆಗಳನ್ನು ಇಲಾಖೆಯ ಮಟ್ಟದಲ್ಲಿ ಚರ್ಚಿಸಿ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನವನ್ನು ನೀಡುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ, ಮಂಥರ್ ಗೌಡ ತಿಳಿಸಿದ್ದಾರೆ.
ಅವರು ಕೂಡಿಗೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೂಡಿಗೆಯ ಕೃಷಿ ಕ್ಷೇತ್ರದ ಆವರಣದ ಅಭಿವೃದ್ಧಿ ಮತ್ತು ಕ್ರೀಡಾ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ಪದವಿಪೂರ್ವ ವಸತಿ ನಿಲಯಗಳ ನಿರ್ಮಾಣ ಸೇರಿದಂತೆ ಕ್ರೀಡಾ ತರಬೇತಿಗೆ ಪೂರಕವಾದ ಎಲ್ಲಾ ಅಂಶಗಳನ್ನು ಮನಗಂಡು ವಿವಿಧ ಕ್ರಿಯಾ ಯೋಜನೆಯ ಅನುಗುಣವಾಗಿ ಹೆಚ್ಚಿನ ಪ್ರಮಾಣದ ಅನುದಾನವನ್ನು ನೀಡಿ ಅಭಿವೃದ್ಧಿಪಡಿಸಲಾಗುವುದು, ಅಲ್ಲದೆ ಇಲಾಖೆಯ ಮುಖೇನ ಕ್ರೀಡಾ ಶಾಲೆಯ ಬಾಲಕ, ಬಾಲಕಿಯರ ಶಾಲಾ ಕಟ್ಟಡದ ದುರಸ್ತಿ, ವಸತಿ ಗೃಹಗಳ ದುರಸ್ತಿ ಸೇರಿದಂತೆ ನೂತನ ಮಾದರಿಯ ಆಟದ ಮೈದಾನ ವ್ಯವಸ್ಥೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್, ಅನಂತ, ಅರುಣ್ ರಾವ್ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು.